ರಾಮಗೋಪಾಲ್ ವರ್ಮ, ಭಾರತೀಯ ಸಿನಿಮಾ ಜಗತ್ತಿಗೆ ಡಿಫರೆಂಟ್ ಹಿಟ್ ಡೈರೆಕ್ಟರ್. ಕೊರೊನಾದ ಕರಾಳತೆಯ ನಡುವೆಯೂ ವೆಬ್ ಮೂಲಕವೇ ಸಿನಿಮಾ ಜಗತ್ತಿನಲ್ಲಿ ತನ್ನದೇ ಆದ ಪಾರುಪತ್ಯ ಸಾಧಿಸುತ್ತಿರುವ ನಿರ್ಧೇಶಕ. ಇತ್ತೀಚಿಗೆ ನೇಕೆಡ್ ಅಥವಾ ನಗ್ನಂ ಸಿನಿಮಾದ ಮೂಲಕ ಪಡ್ಡೆ ಹೈಕ್ಳನ್ನು ನಿಂತಲ್ಲಿ ನಿಲ್ಲಂಗಿಲ್ಲ..ಕುಂತಲ್ಲಿ ಕೂರಂಗಿಲ್ಲ ಸ್ಟೇಟಸ್ ಗೆ ತಂದು ನಿಲ್ಲಿಸಿದ ವರ್ಮ ಈಗ ಒರಿಸ್ಸಾದ ಚೆಲುವಿನ ಒಡತಿಯನ್ನು ತಂದು ಮುಂದೆ ನಿಲ್ಲಿಸಿದ್ದಾರೆ.

ಥ್ರಿಲ್ಲರ್ ಚಿತ್ರಕ್ಕಾಗಿ ಬಂದಿದ್ದಾಳೆ ಅಪ್ಸರಾ ರಾಣಿ!
ಒರಿಸ್ಸಾದಲ್ಲಿ ಹುಟ್ಟಿದ ಅಪ್ಸರಾ ರಾಣಿ, ಡೆಹರಾಡೂನ್ ನಲ್ಲಿದ್ರು. ನಂತರ ಹೈದ್ರಾಬಾದ್ ಗೆ ಶಿಫ್ಟ್ ಆಗಿದ್ರು. ಅತ್ಯುತ್ತಮ ನೃತ್ಯಪಟುವು ಆಗಿರುವ ಗುಂಗುರು ಕೂದಲಿನ ಚೆಲುವೆಯ ಹಾಟ್ ಲುಕ್ ಈಗ ಸಿನಿಮಾ ಲೋಕದಲ್ಲೇ ಹೊಸ ಸಂಚಲನ ಹುಟ್ಟು ಹಾಕಿದೆ.

ಅಪ್ಸರಾ ರಾಣಿ ಜೇನು ಸವಿದರ ವರ್ಮ?
ರಾಮ್ ಗೋಪಾಲ್ ವರ್ಮರ ನೇಕೆಡ್ ಚಿತ್ರ ವೆಬ್ ನಲ್ಲಿ ಹುಚ್ಚೆಬ್ಬಿಸಿತ್ತು. ಈಗ ಥ್ರಿಲ್ಲರ್ ನಲ್ಲಿ ಮತ್ತೊಬ್ಬಳು ಮಾದಕ ನಟಿಯನ್ನು ವರ್ಮ ಇಂಟ್ರೋಡ್ಯೂಸ್ ಮಾಡ್ತಿದ್ದಾರೆ. ಅಪ್ಸರೆಯ ಹಾಟ್ ಫೋಟೋಗಳ ಜೊತೆ ಜೊತೆಗೆ ವರ್ಮ ಮುತ್ತಿಕ್ಕಿರುವ ಒಂದು ಫೋಟೋ ಕೂಡ ವೈರಲ್ ಆಗ್ತಿದೆ.

ರಾಮ ಗೋಪಾಲ ಮರ್ಮ ಯಾರು ಬಲ್ಲರು?
ಕೊರೊನಾದಿಂದಾಗಿ ಚಿತ್ರ ಜಗತ್ತೇ ಹಣವಿಲ್ಲದ ಟೆನ್ಶನ್ ನಲ್ಲಿದ್ರೆ, ರಾಮ್ ಗೋಪಾಲ್ ವರ್ಮ ಮಾತ್ರ ವೆಬ್ ನಲ್ಲಿ ವಿಭಿನ್ನ ಚಿತ್ರ ಪ್ರಯತ್ನಗಳ ಮೂಲಕ ತನ್ನ ಜೋಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ.

ವರ್ಮನ ಟೇಸ್ಟ್ ಗೆ ತಕ್ಕಂತೆ ಹಮ್ಮುಬಿಮ್ಮು, ಮೈಚಳಿ ಬಿಟ್ಟು ನಟಿಸುವ ನಟಿ ಸಿಕ್ಕಿರುವುದರಿಂದ, ಥ್ರಿಲ್ಲರ್ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ.