ಕೊರೊನಾದ ಕರಾಳತೆಯ ನಡುವೆಯೂ ಅಮೇರಿಕಾಗೆ ಭಜರಂಗಿಯ ಶಕ್ತಿ ದೊರೆತಿದೆ. ಅಮೇರಿಕಾದ ಡೆಲವೇರ್ ನಲ್ಲಿ 25 ಅಡಿ ಎತ್ತರದ ಹನುಮಂತನ ವಿಗ್ರಹವನ್ನು ಪ್ರತಿಷ್ಠಾಪಿಸಲು ಎಲ್ಲಾ ತಯಾರಿಗಳು ನಡೆದಿವೆ. ಅಮೇರಿಕಾದ ಅತೀ ಎತ್ತರದ ಹಿಂದೂ ವಿಗ್ರಹಕ್ಕೆ ಭವ್ಯ ಸ್ವಾಗತ ದೊರೆತಿದೆ.

30000 ಕೆಜಿ ತೂಕದ ಈ ವಿಗ್ರಹವನ್ನು ಕಪ್ಪು ಗ್ರಾನೈಟ್ ನಿಂದ ನಿರ್ಮಾಣ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಈ ವಿಗ್ರಹದ ಕೆತ್ತನೆ ಕಾರ್ಯ ನಿರಂತರವಾಗಿ ನಡೆದು, ಈಗ ಪೂರ್ಣಗೊಂಡಿದೆ.

ವಿಗ್ರಹಕ್ಕ ಮೊದಲ ಹತ್ತು ದಿನ ಡೆಲವೇರ್ ನಲ್ಲಿರುವ ಹಿಂದೂ ಅರ್ಚಕರಿಂದ ಪೂಜೆ ಪುನಸ್ಕಾರಗಳು ನಡೆಯಲಿವೆ.ಆರಂಭದಲ್ಲಿ ಯಂತ್ರ ಪ್ರತಿಷ್ಠಾ ಮತ್ತು ಪ್ರಾಣ ಪ್ರತಿಷ್ಠಾ ಕೈಂಕರ್ಯಗಳು ನಡೆಯಲಿವೆ ಎಂದು ಡೆಲವೇರ್ ನಲ್ಲಿರುವ ಹಿಂದೂ ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಅಲ್ಲಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಮೇರಿಕಾದಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚಾಗಿರುವುದರಿಂದ ವಿಗ್ರಹದ ಪ್ರತಿಷ್ಠಾಪನೆಗೆ ಹೆಚ್ಚು ಜನರು ಕೂಡುವುದಿಲ್ಲ. ಆದರೆ ಈಗಲೇ ಭಜರಂಗಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಕೊರೊನಾದ ವಿರುದ್ಧ ಹೋರಾಡಲು ದೈವಬಲವೂ ದೊರೆತಂತೆ ಆಗುತ್ತದೆ ಎಂದು ಹಿಂದೂ ದೇವಸ್ಥಾನಗಳ ಅಸೋಸಿಯೇಶನ್ ಅಧ್ಯಕ್ಷ ಪ್ರತಿಬಂಧ ಶರ್ಮ ಮಾಧ್ಯಮಗಳಿಗೆ ಮಾಹಿತಿನ ನೀಡಿದ್ದಾರೆ.

ಅಮೇರಿಕಾದ ಎರಡನೇ ಅತೀ ದೊಡ್ಡ ಧಾರ್ಮಿಕ ವಿಗ್ರಹ..!
ಅಮೇರಿಕಾದ ನ್ಯೂ ಕ್ಯಾಸ್ಟಲ್ ನಲ್ಲಿನ ಚರ್ಚ್ ನಲ್ಲಿರುವ ಶಾಂತಿ ಸಾರುವ ರಾಣಿಯ ಪ್ರತಿಮೆ ಅತೀ ದೊಡ್ಡ ಪ್ರತಿಮೆಯಾಗಿತ್ತು. ಈಗ ಭಜರಂಗಿಯ ವಿಗ್ರಹ ಅಮೇರಿಕಾ ಎರಡನೇ ಅತೀ ದೊಡ್ಡ ಧಾರ್ಮಿಕ ವಿಗ್ರಹವೆಂಬ ಖ್ಯಾತಿಗೆ ಪಾತ್ರವಾಗಿದೆ.