ಹೊನ್ನಾಳಿ- ದಾವಣಗೆರೆ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ತಮ್ಮ ವಿಭಿನ್ನ ನಡವಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿ ಸುದ್ದಿಯಾಗಿದ್ದಾರೆ.ಹೊನ್ನಾಳಿ ಮತಕ್ಷೇತ್ರದ ಪ್ರವಾಸದ ವೇಳೆ ಬೆನಕನಹಳ್ಳಿ ಗ್ರಾಮಕ್ಕೆ ರೇಣುಕಾಚಾರ್ಯ ಭೇಟಿ ನೀಡಿದ್ದರು. ಈ ವೇಳೆ ಕಾರು ಮತ್ತು ಬೈಕ್ ನಡುವೆ ಅಲ್ಲಿ ಅಪಘಾತವಾಗಿ, ಇಬ್ಬರು ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ರು.

ಇದನ್ನು ನೋಡಿದ ರೇಣುಕಾಚಾರ್ಯ ಓಡೋಡಿ ಬಂದು ರಸ್ತೆಯಲ್ಲಿದ್ದ ಗಾಯಾಳುವನ್ನು ಸಲಹಿದ್ರು. ಬಿದ್ದಿದ್ದ ಇಬ್ಬರನ್ನೂ ಕೂಡ ತಮ್ಮ ಬೆಂಗಾವಲು ವಾಹನದಲ್ಲಿ ಹೊನ್ನಾಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದರು.ಅಷ್ಟಕ್ಕೆ ಸುಮ್ಮನಾಗದ ರೇಣುಕಾಚಾರ್ಯ, ವೈದ್ಯಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದ್ರು, ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲು ಸೂಚಿಸಿದರು.

ಈ ಮೂಲಕ ರೇಣುಕಾಚಾರ್ಯ ಬೆನಕಹಳ್ಳಿಯ ಜನತೆಯ ಮೆಚ್ಚುಗೆಗೆ ಪಾತ್ರವಾದ್ರು. ಮದುವೆಗೆ ಹೋಗಿ ಮಾಸ್ಕ್ ಕೊಡುತ್ತಾ, ಜನರೊಂದಿಗೆ ಗದ್ದೆಯಲ್ಲಿ ನಾಟಿ ಮಾಡುತ್ತಾ ಸುದ್ದಿಯಾಗುವ ರೇಣುಕಾಚಾರ್ಯರ ಮಾನವೀಯತೆಗೆ ಬೆನಕನಹಳ್ಳಿ ಸಾಕ್ಷಿಯಾಯ್ತು.