ಬೆಂಗಳೂರು- ಸಾರಿಗೆ ನೌಕರರ ಪ್ರತಿಭಟನೆಗೆ ಮತ್ತೆ ಟ್ವಿಸ್ಟ್ ಸಿಕ್ಕಿದೆ.ರೈತ ಮುಖಂಡರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಏಕಾಏಕಿ ಥಂಡಾ ಹೊಡೆದಂತಾಗಿ ರಾತ್ರಿ ಬೆಳಗಾಗುವುದರೊಳಗೆ ನಿರ್ಧಾರ ಬದಲಿಸಿದ್ದಾರೆ. ಇವತ್ತು ಹನ್ನೊಂದು ಗಂಟೆಯ ಒಳಗಾಗಿ ಮುಷ್ಕರ ವಾಪಾಸ್ ಪಡೆಯುವುದಾಗಿ ತಿಳಿಸಿದ್ದಾರೆ.
ಸರ್ಕಾರ ಹಲವು ಬೇಡಿಕೆ ಈಡೇರಿಕೆಗೆ ಒಪ್ಪಿದ್ದರೂ ಕೋಡಿಹಳ್ಳಿ ಚಂದ್ರಶೇಖರ್ ಬಣ ಒಮ್ಮೆ ಒಪ್ಪಿಗೆ ಸೂಚಿಸಿ ಮತ್ತೆ ಉಲ್ಟಾ ಹೊಡೆದಿತ್ತು. ಇದರಿಂದ ಸಿಎಂ ಸೇರಿದಂತೆ ಸಚಿವರು ಕೋಡಿಹಳ್ಳಿಯೇ ಇದಕ್ಕೆಲ್ಲ ಕಾರಣ ಅಂದಿದ್ರು. ಅಲ್ಲದೇ, ಕೋಡಿಹಳ್ಳಿಯವರಿಂದಲೇ ತೊಂದರೆಯಾಗುತ್ತಿದೆ ಅಂತ ಆರೋಪಿಸಿದ್ರು.
ಅನಂತ್ ಸುಬ್ಬರಾವ್ ನಡೆಯಿಂದ ಬೆಚ್ಚಿಬಿದ್ದ ಕೋಡಿಹಳ್ಳಿ!
ಅನಂತ್ಕೆ ಸುಬ್ಬರಾವ್ ನೇತೃತ್ವದ ಎಸ್ ಆರ್ ಟಿ ಸಿ ಸ್ಪಾಪ್ ಮತ್ತು ವರ್ಕರ್ಸ್ ಫೆಡರೇಷನ್ ತನ್ನ ಕಾರ್ಯಕರ್ತರಿಗೆ ಸೋಮವಾರದಿಂದ ಕೆಲಸಕ್ಕೆ ಹಾಜರಾಗಲು ಸೂಚಿಸಿತ್ತು. ಇದರಿಂದಾಗಿ ಮುಷ್ಕರ ಮುಂದುವರೆಸಿದ್ರೂ ಸಕ್ಸಸ್ ಕಾಣುವ ಸಾಧ್ಯತೆ ಕಡಿಮೆ ಅಂತ ಅಂದುಕೊಂಡಿರುವ ಕೋಡಿಹಳ್ಳಿ ಇವತ್ತು ಮುಂಜಾನೆ ಮುಷ್ಕರದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ರಾತ್ರೋರಾತ್ರಿಯ ಸರ್ಕಾರದ ನಡೆ, ಯೂನಿಯನ್ ಲೀಡರ್ಸ್ ನಡೆ, ನೌಕರರಿಂದಲೇ ಮುಷ್ಕರ ಮುಂದುವರೆಸಲು ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕೇವಲ ಎಂಟು ಗಂಟೆಯಲ್ಲೇ ಕೋಡಿಹಳ್ಳಿ ನಿರ್ಧಾರ ಬದಲಿಸಿದ್ದು, ಮುಷ್ಕರ ಕೈಬಿಡಲು ತೀರ್ಮಾನಿಸಿದ್ದಾರೆ.ಇವತ್ತು ಮಧ್ಯಾಹ್ನದಿಂದಲೇ ಬಸ್ ಓಡಾಟ ಆರಂಭವಾಗಲಿದೆ