ಕರೊನಾ ಕರಾಳತೆಯಲ್ಲಿ ಯಾವುದೇ ತಾರತಮ್ಯವಿಲ್ಲ..ಅಮೇರಿಕಾವನ್ನು ಹಿಂಡಿ ಹಿಪ್ಪೆಮಾಡಿರುವ ಮಹಾಮಾರಿ ಕರೊನಾ ಈಗ ಉಕ್ರೇನ್ ನಲ್ಲಿ ಉಗ್ರ ತಾಂಡವವಾಡುತ್ತಿದೆ. ಉಕ್ರೆನಿನಲ್ಲಿ ಈಗಾಗ್ಲೇ 30,000 ಸಮೀಪ ಕರೊನಾ ಕೇಸ್ ಗಳು ಬಂದು ನಿಂತಿವೆ. ಹೇಗಪ್ಪಾ ಕಂಟ್ರೋಲ್ ಮಾಡೋದು ಅನ್ನೋ ಟೆನ್ಶನ್ ನಲ್ಲಿ ಇರುವಾಗಲೇ, ಉಕ್ರೆನಿನ ಅಧ್ಯಕ್ಷನಿಗೆ ಬಿಗ್ ಶಾಕ್ ಎದುರಾಗಿದೆ.

ಉಕ್ರೆನಿನ ಅಧ್ಯಕ್ಷನಾಗಿರುವ ವೋಲೋಡಿಮೀರ್ ಜೆಲೆನ್ಸ್ಕಿಯವರ ಮಡದಿಗೆ ಕರೊನಾ ಅಂಟಿಕೊಂಡಿರುವ ಸುದ್ದಿ ಬಯಲಾಗಿದೆ. ವೋಲೋಡಿಮೀರ್ ಅವರ ಮಡದಿ ಒಲೆನಾ ಜೆಲೆನ್ಸ್ಕಾ ಟೆಸ್ಟ್ ಪಾಸಿಟಿವ್ ಆಗಿದೆ. ಯಾವುದೇ ಗುಣಲಕ್ಷಣಗಳು ಕೂಡ ಒಲೆನಾಗೆ ಈವರೆಗೂ ಕಾಣಿಸಿಕೊಂಡಿಲ್ಲ. ಆದರೆ ಟೆಸ್ಟ್ ಮಾಡಿಸಿದ್ದಾಗ ಪಾಸಿಟಿವ್ ಬಂದಿದ್ದು, ಅವರು ಸೆಲ್ಫ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಉಕ್ರೆನಿನ ಅಧ್ಯಕ್ಷ ಕೂಡ ಕರೊನಾ ಟೆಸ್ಟ್ ಮಾಡಿಸಿದ್ದು ರಿಪೋರ್ಟ್ ನೆಗೆಟಿವ್ ಬಂದಿದೆ. ಅಧ್ಯಕ್ಷರ ಮಕ್ಕಳಿಗೂ ಕೂಡ ಕರೊನಾ ನೆಗೆಟಿವ್ ಬಂದಿದೆ. ಆದರೆ, ದೇಶದ ಜನತೆ ಮಾತ್ರ ಅಧ್ಯಕ್ಷರ ಮಡದಿಗೆ ಕರೊನಾ ಬಂದಿರೋದ್ರಿಂದ ಭಯಭೀತರಾಗಿದ್ದಾರೆ.