ಕರೊನಾ ನಡುವೆ ಹ್ಯಾಟ್ರಿಕ್ ಹೀರೋ ಬರ್ತ್ ಡೇಯಂದೆ ಅಭಿಮಾನಿಗಳಿಗೆ ಸಿನಿರಸದೌತಣ ಬಡಿಸಲು ಸಕಲ ಸಿದ್ಧತೆಗಳಾಗಿವೆ. ಜುಲೈ 12ರಂದು ಶಿವಣ್ಣನ ಜನುಮದಿನವಾದ್ದರಿಂದ ಆದಿನವೇ ಭಜರಂಗಿ 2 ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಲಾಗಿದೆ. ಜುಲೈ 12 ರಂದೇ ಚಿತ್ರ ಬಿಡುಗಡೆ ಚಿತ್ರತಂಡ ಯೋಚನೆ ಮಾಡಿದೆ. ಜಯಣ್ಣ ಫಿಲಂಸ್ ಅಡಿಯಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಹರ್ಷ ಆಕ್ಷನ್ ಕಟ್ ಹೇಳಿದ್ದಾರೆ. ಸಂಗೀತದಲ್ಲಿ ಅರ್ಜುನ್ ಜನ್ಯ ಮೋಡಿ ಮಾಡಿದ್ದಾರೆ. ಚಿತ್ರದಲ್ಲಿ ಜಾಕಿ ಭಾವನಾ ನಾಯಕಿಯಾಗಿ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಹಲವು ಅಡ್ಡಿ ಆತಂಕಗಳು ಎದುರಾದರೂ ಕೂಡ ಕುಗ್ಗದೇ ಮುನ್ನುಗ್ಗಿದ ಚಿತ್ರ ತಂಡ ಜುಲೈ 12ರಂದು ಬಿಡುಗಡೆ ಮಾಡಲು ಸರ್ವಸನ್ನದ್ಧವಾಗಿದೆ. ಚಿತ್ರದ ಮೋಷನ್ ಪೋಸ್ಟರ್ ಜನವರಿ ಹದಿನಾಲ್ಕರಂದು ಬಿಡುಗಡೆಯಾಗಿತ್ತು..ಕರೊನಾದ ಆರ್ಭಟದ ನಡುವೆಯೂ ಚಿತ್ರತಂಡದ ಈ ನಿರ್ಧಾರ ಸಾಕಾರವಾಗುತ್ತಾ ಕಾದು ನೋಡ್ಬೇಕು.