ಬೆಂಗಳರು: ರಾಜ್ಯದಲ್ಲಿ ನಾಗಾಲೋಟ ತಲುಪಿರೋ ಕೊರೋನಾ ವೈರಸ್ ಓಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಘೋಷಿಸಿರೋ ಭಾನುವಾರದ ಲಾಕ್ಡೌನ್ ನಾಳೆಯಿಂದ ಜಾರಿಗೆ ಬರಲಿದೆ. 33 ಗಂಟೆಗಳ ಕಾಲ ರಾಜ್ಯ ಸಂಪೂರ್ಣ ಲಾಕ್ ಡೌನ್ಆಗಲಿದೆ. ರಾಜ್ಯಾದ್ಯಂತ ಭಾನುವಾರದ ಲಾಕ್ಡೌನ್ ಯಶಸ್ವಿಗೊಳಿಸೋ ಸಲುವಾಗಿ ಪೊಲೀಸ್ ಇಲಾಖೆಯೂ ಸಜ್ಜಾಗಿದ್ದು ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಇಂದು ರಾತ್ರಿ 8 ಗಂಟೆಯಿಂದ ಸೋಮವಾಗ ಬೆಳಗಿನ ಜಾವ 5 ಗಂಟೆವರೆಗೂ ಲಾಕ್ಡೌನ್ ನಿಯಮ ಜಾರಿಯಲ್ಲಿರಲಿದೆ. ಲಾಕ್ಡೌನ್ ಹಿನ್ನಲೆ ವಾಹನಗಳ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ತೀರಾ ಅಗತ್ಯವಿಲ್ಲದೇ ರಸ್ತೆಯಲ್ಲಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಪೊಲೀಸರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ನಾಳೆ ಏನಿರುತ್ತೆ ? ಏನು ಇರೋದಿಲ್ಲ ?
ಲಾಕ್ಡೌನ್ ವೇಳೆ ಹಾಲು, ತರಕಾರಿ, ಹಣ್ಣು, ಔಷಧ, ಆಸ್ಪತ್ರೆ ಸೇವೆ ಸೇರಿ ತೀರಾ ಅಗತ್ಯ ಇರೋ ಸೇವೆಗಳಿಗೆ ಮಾತ್ರ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಉಳಿದಂತೆ ರಾಜ್ಯದ ಗಡಿಗಳನ್ನೂ ಇಂದು ರಾತ್ರಿ 8 ಗಂಟೆಗೆ ಬಂದ್ ಮಾಡಲಾಗ್ತಿದೆ, ಇನ್ನು ಬೆಂಗಳೂರಿನಲ್ಲಿ ಪ್ರಮುಖ ರಸ್ತೆಗಳನ್ನ ಬಂದ್ ಮಾಡಲು ನಿರ್ಧರಿಸಲಾಗಿದೆ. ಇನ್ನು ಮುಖ್ಯ ಫ್ಲೈಓವರ್ ಗಳನ್ನೂ ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಬಂದ್ ಮಾಡಲಾಗ್ತಿದೆ. ಇನ್ನು ಆಟೋ, ಕ್ಯಾಬ್, ಬಿಎಂಟಿಸಿ, ಕೆಎಸ್ ಆರ್ ಟಿಸಿ, ಸೇರಿ ಎಲ್ಲಾ ಸಾರಿಗೆ ವ್ಯವಸ್ಥೆ ಈ 33 ಗಂಟೆಗಳ ಕಾಲ ಬಂದ್ ಆಗ್ತಿವೆ.