ದೆಹಲಿ: ಕೊರೊನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಕಾಲ ಕಳೆದಿದ್ದಾರೆ.. ಈ ವೇಳೆ ಹಲವು ಮಂದಿ ಅನೇಕ ವಿಚಾರಗಳನ್ನು ಕಲಿತಿದ್ದಾರೆ. ಕೆಲವರು ಅಡುಗೆ ಮಾಡುವುದನ್ನು ಕಲಿತ್ರೆ ಇನ್ನು ಕೆಲವು ಮಂದಿ ತಮ್ಮ ಡಿಫರೆಂಟ್ ಐಡಿಯಾಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಹೀಗೆ ತಮ್ಮ ಕ್ವಾರಂಟೈನ್ ಕಥೆಯನ್ನು ರೂಪಿಸಿಕೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಹೊಸ ಪಾಠವೊಂದನ್ನು ಕಲಿತಿದ್ದಾರೆ.
ಹೌದು, ಕೊರೊನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಪತ್ನಿ ಅನುಷ್ಕಾ ಶರ್ಮಾ ಹುಟ್ಟುಹಬ್ಬಕ್ಕೆ ನಾನೇ ಕೇಕ್ ತಯಾರಿಸಿದ್ದೆ. ಇದು ನನ್ನ ಗಮನ ಸೆಳೆಯುವ ಕ್ವಾರಂಟೈನ್ ಕಥೆಯಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅನುಷ್ಕಾ ಅವರ ಹುಟ್ಟುಹಬ್ಬದಂದು ಕೇಕ್ ತಯಾರಿಸಿದ ಕೊಹ್ಲಿ, ಇದು ಕೇಕ್ ತಯಾರಿಕೆಯ ಮೊದಲ ಪ್ರಯತ್ನ ಎಂದು ಹೇಳಿಕೊಂಡಿದ್ದರು. ನನ್ನ ಜೀವನದಲ್ಲಿಯೇ ಮೊದಲ ಬಾರಿಗೆ ಅನುಷ್ಕಾ ಶರ್ಮಾಳ ಹುಟ್ಟುಹಬ್ಬದಂದು ಕೇಕ್ ತಯಾರು ಮಾಡಿದೆ. ಆದ್ದರಿಂದ ಇದು ನನ್ನ ಕ್ವಾರಂಟೈನ್ ಕಥೆಯಾಗಿದೆ. ಈ ಹಿಂದೆ ಎಂದೂ ಕೂಡಾ ಕೇಕ್ ಮಾಡಿರಲಿಲ್ಲ. ಮೊದಲ ಬಾರಿಯಲ್ಲೇ ಸರಿಯಾಗಿ ಕೇಕ್ ತಯಾರಿಸಿದ್ದೆ. ಆಕೆ ಅದನ್ನು ಇಷ್ಟಪಟ್ಟಳು. ಅದು ತುಂಬಾ ವಿಶೇಷವಾಗಿತ್ತು ಎಂದು ಮಾಯಾಂಕ್ ಅಗರ್ ವಾಲ್ ಗೆ ಕೊಹ್ಲಿ ಹೇಳಿರುವ ವಿಡಿಯೋವೊಂದನ್ನು ಬಿಸಿಸಿಐ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.