ಕೊಚ್ಚಿನ್: ಗಲ್ಫ್ ರಾಷ್ಟ್ರಗಳಲ್ಲಿ ಇರುವವರು ಭಾರತಕ್ಕೆ ಬರಬೇಕೆಂದು ಹಾತೊರೆಯುತ್ತಿದ್ದಾರೆ. ಅವರನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು, ಗಲ್ಫ್ ರಾಷ್ಟ್ರಗಳಲ್ಲಿರುವ ದೊಡ್ಡ ದೊಡ್ಡ ಉದ್ಯಮಿಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಮನೆ ಸೇರಿದರೆ ಸಾಕಪ್ಪಾ ಅಂತ ಬರುವವರ ನಡುವೆ ಕೇರಳದ ಒಬ್ಬ ವ್ಯಕ್ತಿಯ ದುರಾಸೆಯೂ ಬಯಲಾಗಿದೆ.
ಶಾರ್ಜಾದಿಂದ ಕೇರಳದ ಕೊಚ್ಚಿಗೆ ನಿನ್ನೆ ಆಗಮಿಸಿರುವ G9 456 ಎಂಬ ಏರ್ ಅರೇಬಿಯಾ ಫ್ಲೈಟ್ ನಲ್ಲಿ ಬಂದ ವ್ಯಕ್ತಿ, ಬರೋಬ್ಬರಿ ಒಂದು ಕೆಜಿಗಿಂತಲೂ ಹೆಚ್ಚು ಚಿನ್ನ ತಂದು ಸಿಕ್ಕಿಹಾಕಿಕೊಂಡಿದ್ದಾನೆ. 1ಕೆಜಿ 150 ಗ್ರಾಂ ಚಿನ್ನವನ್ನು ಪ್ಯಾಕ್ ಮಾಡಿ ತನ್ನ ಅಂಡರ್ ವೇರ್ ನಲ್ಲಿ ಇಟ್ಟುಕೊಂಡು ಆಗಮಿಸಿದ್ದಾನೆ.. ಕೊರೊನಾದ ಭೀಕರತೆಯ ನಡುವೆ ಆಗಮಿಸಿದ್ದರಿಂದ ಕೇವಲ ಜ್ವರ ಮಾತ್ರ ಚೆಕ್ ಮಾಡ್ತಾರೆ ಅಂತ ಅಂದುಕೊಂಡ್ನೋ ಆಸಾಮಿ ಗೊತ್ತಿಲ್ಲ. ಅಂತೂ ಈಗ ಸಿಕ್ಕಿ ಹಾಕಿಕೊಂಡಿದ್ದಾನೆ. ಈ ಚಿನ್ನದ ಬಗ್ಗೆ ತನಿಖೆ ಮುಂದುವರೆದಿದೆ.