ಬೆಳ್ತಂಗಡಿ: ವೃದ್ಧೆ ತಾಯಿಗೆ ಮಗ ಹಾಗೂ ಮೊಮ್ಮಗ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸವಣಾಲು ಎಂಬಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡೀಯೋ ನಿಜಕ್ಕೂ ಸಮಾಜದ ಕೆಂಗಣ್ಣಿಗೆ ಕಾರಣವಾಗಿದೆ. ಮಗನ ಈ ರೌದ್ರವತಾರಕ್ಕೆ ಸಮಾಜವೇ ಬೆಚ್ಚಿಬಿದ್ದಿದೆ.ಅಲ್ಲದೇ, ಈತನಿಗೆ ಶಿಕ್ಷೆ ಆಗ್ಲೇಬೇಕು ಅಂತ ಸಮಾಜವೂ ಕೂಡ ಅಪೇಕ್ಷಿಸುತ್ತಿದೆ.
ಸವಣಾಲು ಹಲಸಿನಕಟ್ಟೆ ಎಂಬಲ್ಲಿನ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿ ಎಂಬರಿಗೆ ಅವರ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪೂರ್ತಿ ಕುಡಿದು ಮಲಗಿದಲ್ಲೇ ಇರುವ ಅಪ್ಪಿ ಶೆಟ್ಟಿಯವರ ಮೇಲೆ ಹಲ್ಲೆ ನಡೆಸಿದ್ದಾರೆ.ಅಲ್ಲದೇ ತಾಯಿಯನ್ನು ಎತ್ತಿ ಬಿಸಾಡಿದ್ದಾರೆ. ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನೋರ್ವ ಮೊಮ್ಮಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.
ತಾಯಿಯ ಅನಾರೋಗ್ಯವೇ ಮಗನ ಸಿಟ್ಟಿಗೆ ಕಾರಣನಾ?
ಅನಾರೋಗ್ಯದಿಂದ ಇರುವ ಅಪ್ಪಿಶೆಟ್ಟಿ ಕಳೆದ ಕೆಲ ವರ್ಷದಿಂದ ಮಲಗಿದಲ್ಲೇ ಇದ್ದಾರೆ. ಇವರ ಮೇಲೆ ಮಗ ಹಾಗೂ ಮೊಮ್ಮಗ ಪ್ರತಿದಿನ ಬಂದು ಹಲ್ಲೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ನೊಂದ ಇನ್ನೋರ್ವ ಮಗ ವೀಡಿಯೋ ಮಾಡಿದ್ದಾರೆ ಎನ್ನಲಾಗಿದೆ.
ಯಾರೆ ಆಗಲಿ, ಇವರಿಗೆ ಶಿಕ್ಷೆಯಾಗಲೇಬೇಕು
ಈ ವೀಡಿಯೋದ ಅಸಲಿಯತ್ತನ್ನು ಕಂಡು ಹಿಡಿದು, ಈ ರೀತಿ ವೃದ್ಧೆಗೆ ಚಿತ್ರಹಿಂಸೆ ನೀಡುತ್ತಿರುವವರು ಯಾರೇ ಆದ್ರೂ ಅವರ ಮೇಲೆ ಕ್ರಮ ಕೈಗೊಳ್ಳಲೇಬೇಕು. ಇಂತಹ ಕ್ರೂರಿಗಳನ್ನು ಹೀಗೇ ಬಿಟ್ಟರೇ, ಸಮಾಜದ ಅದೆಷ್ಟೋ ದುಷ್ಟರಿಗೆ ದಾರಿ ಮಾಡಿಕೊಟ್ಟಂತಾಗುತ್ತೆ ಅನ್ನುವುದರಲ್ಲಿ ಅನುಮಾನವಿಲ್ಲ. ಈಗಾಗ್ಲೇ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.