ಕೊಚ್ಚಿನ್- ಕೊರೊನಾದ ಆರ್ಭಟದ ನಡುವೆ ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರ ಬದುಕು ಕಷ್ಟವಾಗಿದೆ. ಇದಕ್ಕಾಗಿ ಹೇಗಾದ್ರೂ ಮಾಡಿ ತಮ್ಮ ಊರು ಸೇರಿಕೊಳ್ಳಬೇಕು ಅಂತ ಪರದಾಡುತ್ತಿದ್ದಾರೆ.ಹೀಗೆ ಕೆಲವರಿಗೆ ವಿಮಾನದಲ್ಲಿ ಸೀಟ್ ಸಿಕ್ಕಿದೆ.ಇಷ್ಟೇಲ್ಲ ಕಷ್ಟಪಟ್ಟು ಬರುತ್ತಿರುವಾಗಲೂ ಕೆಲವರು ಕಳ್ಳಾಟಗಳನ್ನು ನಿಲ್ಲಿಸಿಲ್ಲ. ಇತ್ತೀಚೆಗಷ್ಟೇ, ದುಬೈನಿಂದ ಬಂದ ವ್ಯಕ್ತಿಯೊಬ್ಬ ಅಂಡರ್ ವೇರ್ ನಲ್ಲಿ ಒಂದು ಕೆಜಿಗೂ ಅಧಿಕ ಚಿನ್ನ ತಂದು ಸಿಕ್ಕಿಹಾಕಿಕೊಂಡಿದ್ರು. ಈಗ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮತ್ತೊಬ್ಬನನ್ನು ಸೆರೆ ಹಿಡಿದಿದ್ದಾರೆ.

ರಾಸ್ ಅಲ್ ಕೈಮಹ್ ನಿಂದ ಬಂದ ಕೇರಳಿಗ 736 ಗ್ರಾಂ ಚಿನ್ನವನ್ನು ತನ್ನ ಚಡ್ಡಿಯೊಳಗೆ ಇಟ್ಟುಕೊಂಡು ಬಂದು ಸಿಕ್ಕಿಹಾಕಿಕೊಂಡಿದ್ದಾನೆ. ಕೇರಳದ ಕೊಚ್ಚಿಯಲ್ಲಿರುವ ಕಸ್ಟಮ್ಸ್ ಅಧಿಕಾರಗಳು ಪರೀಕ್ಷೆ ನಡೆಸಿದ ವೇಳೆ ಚಿನ್ನದ ಮ್ಯಾಟರ್ ಬಯಲಾಗಿದೆ.