ವಾಷಿಂಗ್ಟನ್: ಕೊರೊನಾ ಭೀತಿಯಿಂದಾಗಿ ವಿಶ್ವದೆಲ್ಲೆಡೆ ಆರ್ಥಿಕ ಹಿಂಜರಿತ ಉಂಟಾಗಿದೆ.. ಈ ಹಿನ್ನೆಲೆಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾ ತನ್ನ ದೇಶದಲ್ಲಿ ನಿರುದ್ಯೋಗ ತಗ್ಗಿಸಲು ಹಾಗೂ ವಲಸೆ ಕಾರ್ಮಿಕರನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಚ್-1ಬಿ, ಎಲ್-1 ವೀಸಾ ಹಾಗೂ ಇತರೆ ಕೆಲಸಗಳ ವೀಸಾಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿದೆ..
ವೃತ್ತಿ ಆಧರಿತ ಹೊಸ ವೀಸಾಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ನಿಷೇಧ ಹೇರಿದ್ದು, ಉದ್ಯೋಗಕ್ಕಾಗಿ ಅಮೆರಿಕ ಪ್ರವೇಶಿಸುವ ವಲಸಿಗರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.. ಇನ್ನು ಈ ವೀಸಾ ನಿಷೇಧ ವರ್ಷದ ಅಂತ್ಯದವರೆಗೂ ಮುಂದುವರಿಯಲಿದೆ. ರದ್ದುಗೊಂಡಿರುವ ಎಚ್-1ಬಿ ವೀಸಾ ಭಾರತೀಯರಲ್ಲಿ ಹೆಚ್ಚು ಬೇಡಿಕೆಯಿರುವ ವೀಸಾ ಆಗಿದೆ. ಹೀಗಾಗಿ ಭಾರತೀಯ ಟೆಕ್ಕಿಗಳಿಗೆ ಅತಿ ಹೆಚ್ಚಿನ ಸಮಸ್ಯೆ ಉಂಟಾಗಲಿದೆ.
ಕೊರೊನಾದಿಂದಾಗಿ ಅಮೆರಿಕದಲ್ಲಿ ದಾಖಲೆಯ ಉದ್ಯೋಗ ನಷ್ಟ ಉಂಟಾಗಿತ್ತು. ಹೀಗಾಗಿ ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿಯ ಸವಾಲು ಸರಕಾರದ ಮೇಲಿತ್ತು. ಹೀಗಾಗಿ ವಿದೇಶಿ ಕೆಲಸಗಾರರ ವೀಸಾಗಳ ಮೇಲೆ ತಾತ್ಕಾಲಿಕ ಅಮಾನತು ಹೇರಿದೆ. ಇದರಿಂದಾಗ ಅಮೆರಿಕನ್ನರಿಗೆ 5.25 ಲಕ್ಷ ಉದ್ಯೋಗಾವಕಾಶಗಳು ಮುಕ್ತವಾಗಲಿವೆ ಎಂದು ಶ್ವೇತಭವನ ತಿಳಿಸಿದೆ.