ಮುಂಬೈ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಾವಾಗ ಶುರುವಾಗುತ್ತೆ ಅನ್ನೋದನ್ನು ಕ್ರಿಕೆಟ್ ಅಭಿಮಾನಿಗಳು ಪ್ರತಿದಿನ ಕೇಳುತ್ತಲೇ ಇದ್ದಾರೆ.. ಈ ವರ್ಷದ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿತ್ತು.. ಆದರೆ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಧೋರಣೆಗೆ ಬಿಸಿಸಿಐ ಸುಸ್ತಾಗಿ ಹೋಗಿದೆ.
ಟಿ20 ವಿಶ್ವಕಪ್ ಆಯೋಜನೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡ ಬಳಿಕವಷ್ಟೇ ಐಪಿಎಲ್ ಟೂರ್ನಿಯ ಬಗ್ಗೆ ಫೈನಲ್ ನಿರ್ಧಾರವನ್ನು ಕೈಗೊಳ್ಳಲಾಗುತ್ತೆ ಎಂದು ಬಿಸಿಸಿಐ ತಿಳಿಸಿತ್ತು.. ಆದರೆ ಈಗ ವಿಶ್ವಕಪ್ ಆಯೋಜನೆಯ ಬಗ್ಗೆ ಐಸಿಸಿ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುತ್ತಿದೆ. ಇದು ಬಿಸಿಸಿಐನ ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ ಐಸಿಸಿ ನಿರ್ಧಾರಕ್ಕೆ ಕಾಯದೆ ಮುಂದುವರಿಯಲು ಬಿಸಿಸಿಐ ಮುಂದಾಗಿದೆ. ಯಾವಾಗ ಮತ್ತು ಏನು ಮಾಡಬೇಕು ಎಂದು ಇತರರು ನಿರ್ಧರಿಸುವವರೆಗೆ ಇನ್ನು ಕಾಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಹೇಳಿದ್ದಾರೆ.