ನವದೆಹಲಿ: ಭಾರತದಲ್ಲಿ ಕೊರೊನಾ ಪರೀಕ್ಷೆ ಭರದಿಂದ ಸಾಗುತ್ತಿದೆ. ನಿರಂತರವಾಗಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನ ಪರಿಷತ್ ಪ್ರಕಾರ (ICMR)ಪ್ರಕಾರ ಜೂನ್ 25ನೇ ತಾರೀಕಿನಂದು ಒಂದೇ ದಿನ ಬರೋಬ್ಬರಿ 2,15,446 ಮಂದಿಯ ಪರೀಕ್ಷೆ ನಡೆಸಲಾಗಿದೆ ಅಂತ ಹೇಳಿದೆ.
ಈ ಮೂಲಕ ಭಾರತದಲ್ಲಿ ಕೋವಿಡ್ 19 ಹಬ್ಬುತ್ತಿರುವ ವೇಗಕ್ಕಿಂತ ನಾಲ್ಕೈದು ಪಟ್ಟು ವೇಗದಲ್ಲಿ ಸರ್ಕಾರವೂ ಜನರ ಪರೀಕ್ಷೆಯನ್ನು ನಡೆಸುತ್ತಿದೆ. ಭಾರತದಲ್ಲಿ ಈವರೆಗೆ ಒಟ್ಟು 77,76,228 ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ ಅಂತನೂ ಐಸಿಎಂ ಆರ್ ಹೇಳಿದೆ. ಇಷ್ಟು ಜನರಲ್ಲಿ ಈಗಾಗ್ಲೇ 4,90,000 ಜನರಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ.
ಈ 4,90,000 ಸೋಂಕಿತರಲ್ಲಿ 2,86,000 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 15301. ವಿಶ್ವದ ಲೆಕ್ಕಾಚಾರದಲ್ಲಿ ನೋಡುವುದಾದರೇ ವಿಶ್ವದಲ್ಲಿ ಅಂದಾಜು 4,90,000 ಜನರು ಕರೊನಾದಿಂದ ಮೃತರಾಗಿದ್ದಾರೆ.