ಬೆಂಗಳೂರು-ಡಬ್ಬಿಂಗ್ ವಿರೋಧದ ನಡುವೆಯೂ ಕರ್ನಾಟಕಕ್ಕೆ ಡಬ್ಬಿಂಗ್ ಎಂಟ್ರಿ ಕೊಟ್ಟಾಗಿದೆ. ಹಲವು ಬೇರೆ ಭಾಷೆಯ ಚಲನಚಿತ್ರಗಳು, ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿದ್ದು, ಈಗ ಕಿರುತೆರೆಯಲ್ಲಿ ಪ್ರಸಾರವೂ ಆಗುತ್ತಿದೆ. ಆದರೆ ಕನ್ನಡ ಚಿತ್ರಗಳು ಕಳೆದ ಹಲವು ವರ್ಷಗಳಿಂದ ಹಿಂದಿಗೆ ಡಬ್ ಆಗುತ್ತಿವೆ.

ಯೂ ಟ್ಯೂಬ್ ನಲ್ಲಿ ಕನ್ನಡದಿಂದ ಡಬ್ ಆಗಿರುವ ಹಿಂದಿ ಚಿತ್ರಗಳು ಪೋಸ್ಟ್ ಮಾಡಲಾಗಿರುತ್ತೆ. ಇವುಗಳಲ್ಲಿ ಈಗ ಸುದೀಪ್ ಅಭಿನಯಿಸಿರುವ ಹೆಬ್ಬುಲಿ ಮತ್ತೊಂದು ದಾಖಲೆ ಬರೆದಿದೆ. ಐದು ಕೋಟಿಗೂ ಅಧಿಕ ಜನ ಹೆಬ್ಬುಲಿ ಹಿಂದಿ ಡಬ್ಬಿಂಗ್ ಚಿತ್ರವನ್ನು ಯೂ ಟ್ಯೂಬ್ ನಲ್ಲಿ ನೋಡಿದ್ದಾರೆ.
ಸೈನಿಕ ಪಾತ್ರದಲ್ಲಿ ಸುದೀಪ್ ಅಭಿನಯಿಸಿರುವ ಚಿತ್ರವನ್ನು ಹಿಂದಿ ಪ್ರೇಕ್ಷಕರು ಅಪ್ಪಿಕೊಂಡು ಒಪ್ಪಿದ್ದಾರೆ. ಈ ಮೂಲಕ ಕನ್ನಡಕ್ಕೆ ಬೇರೇ ಭಾಷೆಯ ಚಿತ್ರಗಳು ಡಬ್ಬಿಂಗ್ ನಡೆಯುತ್ತಿದೆ, ಇದರಿಂದ ಕನ್ನಡದ ಕಲಾವಿದರಿಗೆ ತೊಂದರೆಯುಂಟಾಗುತ್ತದೆ ಎಲ್ಲವೂ ಸತ್ಯ. ಇದರ ಜೊತೆ ಜೊತೆಗೆ ಕನ್ನಡದ ಚಿತ್ರಗಳು ಕೂಡ ಹಿಂದಿ ಭಾಷೆಯಲ್ಲಿ ಜನಪ್ರಿಯವಾಗುತ್ತಿರುವುದು ಸಂತಸದ ವಿಚಾರ.