ಸೋಲ್: ಸದ್ಯ ಕೆಲ ತಿಂಗಳುಗಳಿಂದ ಉತ್ತರ ಕೊರಿಯಾದ ನಿರಂಕುಶ ಪ್ರಭು ಕಿಮ್ ಜಾಂಗ್ ಉನ್ ಬದುಕಿದ್ದಾನಾ ಇಲ್ಲವೇ ಎಂಬ ಬಗ್ಗೆ ಸಾಕಷ್ಟು ಸುದ್ದಿಯಾಗ್ತಿದೆ. ಈ ನಡುವೆ ಕೆಲ ಮಾಧ್ಯಮಗಳು ಕಿಮ್ ಸಾವಿಗೀಡಾಗಿದ್ದು ಶೀಘ್ರದಲ್ಲೇ ಸಾವಿನಬಗ್ಗೆ ಅಧಿಕೃತ ಘೋಷಣೆ ಮಾಡಲಾಗುತ್ತೆ ಎಂದು ವರದಿ ಮಾಡಿವೆ. ಕಿಮ್ ದೀರ್ಘಕಾಲದ ಅನಾರೋಗ್ಯದ ಬಳಿಕ ಸಾವಿಗೀಡಾಗಿದ್ದಾನೆ ಎಂದು ವರದಿ ಹೇಳ್ತಿವೆ. ಆದ್ರೆ ಸರ್ವಾಧಿಕಾರಿ ರಾಷ್ಟ್ರದಲ್ಲಿ ಆಡಳಿತ ವಿಭಾಗದಿಂದ ಕಿಮ್ ಬಗ್ಗೆಯಾಗಲಿ ಆತನ ಆರೋಗ್ಯದ ಬಗ್ಗೆಯಾಗಲಿ ಯಾವುದೇ ಸುಳಿವನ್ನೂ ಬಿಟ್ಟುಕೊಡದೆ ಗೌಪ್ಯತೆ ಮುಂದುವರೆಸಲಾಗಿದೆ. ಕೆಲ ದಿನಗಳ ಹಿಂದೆ ಕಿಮ್ ಕೋಮದಲ್ಲಿದ್ದಾರೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿಯಾಗಿದ್ದ ಚಾಂಗ್ ಸಾಂಗ್ ಮಿನ್ ಹೇಳಿದ್ದರು. ಆದ್ರೆ ಈಗ ದಕ್ಷಿಣ ಕೊರಿಯಾದ ಕೆಲ ಮಾಧ್ಯಮಗಳು ಕಿಮ್ ಸಾವಿಗೀಡಾಗಿರೋ ಬಗ್ಗೆ ಮಾಹಿತಿ ಪ್ರಸಾರ ಮಾಡಿವೆ. ಹೀಗಾಗಿ 36 ವರ್ಷದ ಕಿಮ್ ಬದುಕಿದ್ದಾನಾ ಇಲ್ಲವೇ ಎಂಬುದು ವಿಶ್ವದ ಪಾಲಿಗೆ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.