ನವದೆಹಲಿ-ಕೇಂದ್ರ ಸರ್ಕಾರ ಚೀನಾ ವಿರುದ್ಧ ಒಂದೊಂದೇ ಬಾಣಗಳನ್ನು ಬಿಡುತ್ತಿದೆ.ಮೊನ್ನೆಯಷ್ಟೇ 59 ಚೀನಾದ ಆ್ಯಪ್ ಗಳನ್ನು ಬ್ಯಾನ್ ಮಾಡಿದ ಬೆನ್ನಲ್ಲೇ, ಈಗ ಮತ್ತೊಂದು ಬಿಗ್ ಶಾಕ್ ನೀಡಿದೆ. ಈ ಬಾರಿ ಕೇಂದ್ರ ಸರ್ಕಾರ, ಚೀನಾದ ಜೊತೆಗೆ ಪಾಕಿಸ್ತಾನಕ್ಕೂ ಛಾಟಿ ಬೀಸಿದೆ.
ಚೀನಾಗೆ ಕೇಂದ್ರದ ಪವರ್ ಸ್ಟ್ರೋಕ್
ಕೆಂಪು ರಾಷ್ಟ್ರದಿಂದ ಶಕ್ತಿ ಉಪಕರಣಗಳ ಆಮದು ಇಲ್ಲ
ಚೀನಾದಿಂದ ಭಾರತಕ್ಕೆ ಶಕ್ತಿ (ಇಂಧನ)ಉಪಕರಣಗಳು ಆಮದಾಗುತ್ತಿತ್ತು. ವಿದ್ಯುತ್ ಸಲಕರಣೆಗಳು ಕೂಡ ಆಮದಾಗುತ್ತಿತ್ತು. ಇದಕ್ಕೆ ಈಗ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬ್ರೇಕ್ ಹಾಕಿದೆ. ಕೇಂದ್ರದ ಇಂಧನ ಸಚಿವ ಆರ್ ಕೆ ಸಿಂಗ್, ಎಲ್ಲಾ ರಾಜ್ಯಗಳ ಇಂಧನ ಸಚಿವರೊಂದಿಗಿನ ವೀಡಿಯೋ ಕಾನ್ಫರೆನ್ಸ್ ವೇಳೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ. ದೇಶದ ಯಾವುದೇ ರಾಜ್ಯಗಳು ಕೂಡ ಇಂಧನದ ಸಲಕರಣೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲು ಮುಂದಾಗಬಾರದು, ಆಮದು ಮಾಡಿಕೊಳ್ಳುವ ಮುನ್ನ ಕೇಂದ್ರದ ಅನುಮತಿ ಅತ್ಯಗತ್ಯ ಅಂತ ಆರ್ ಕೆ ಸಿಂಗ್ ಹೇಳಿದ್ದಾರೆ.

ಕೆಂಪು ರಾಷ್ಟ್ರಕ್ಕೆ 21 ಸಾವಿರ ಕೋಟಿ ನಷ್ಟ!
ಭಾರತ ಒಟ್ಟಾರೆಯಾಗಿ 71ಸಾವಿರ ಕೋಟಿಯಷ್ಟು ಇಂಧನದ ಸಲಕರಣೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಇದರಲ್ಲಿ 21ಸಾವಿರ ಕೋಟಿಯಷ್ಟು ಹಣ ಚೀನಾಗೆ ಸೇರುತ್ತಿತ್ತು ಅಂತ ಸಿಂಗ್ ಹೇಳಿದ್ದಾರೆ. ಕೇಂದ್ರದ ಈ ನಿರ್ಧಾರ ಚೀನಾಗೆ ದೊಡ್ಡ ಪೆಟ್ಟು ಕೊಡುವುದರಲ್ಲಿ ಅನುಮಾನವಿಲ್ಲ.
ಚೀನಾದ ನಡೆಯನ್ನು ಒಪ್ಪಲು ಆಗಲ್ಲ
ಚೀನಾದಿಂದ ಭಾರತಕ್ಕೆ ಇಷ್ಟೋಂದು ದೊಡ್ಡ ಮೊತ್ತದ ವಸ್ತುಗಳು ಆಮದಾಗುತ್ತಿದೆ. ಆದರೂ ಗಡಿಯಲ್ಲಿ ಚೀನಾ ತನ್ನ ಪಾಪಿ ಬುದ್ಧಿಯನ್ನು ಬಿಡುತ್ತಿಲ್ಲ, ಆದ್ದರಿಂದ ನಾವು ಚೀನಾ ಮತ್ತು ಪಾಕಿಸ್ತಾನದಿಂದ ಯಾವುದೇ ವಸ್ತುವನ್ನು ತೆಗೆದುಕೊಳ್ಳಬಾರದೆಂದು ನಿರ್ಧರಿಸಿದ್ದೇವೆಂದು ಸಚಿವರು ಹೇಳಿದರು.
ನಮ್ಮಲ್ಲೇ ತಯಾರಿಸುತ್ತೇವೆ,ತಯಾರಿಸೋಣ
ಟವರ್ ಗಳ ಸಲಕರಣೆಗಳು, ಕಂಡಕ್ಟರ್ ಗಳು, ಟ್ರಾನ್ಸ್ ಫಾರ್ಮರ್ಸ್, ಮೀಟರ್ ಗಳನ್ನು ನಾವೇ ತಯಾರಿಸುತ್ತೇವೆ ಮತ್ತು ತಯಾರಿಸೋಣ ಅಂತ ಎಲ್ಲಾ ಸಚಿವರಿಗೂ ತಿಳಿಸಿದ್ರು.ಈ ಮೂಲಕ ಚೀನಾದ ದುರ್ವರ್ತನೆಗೆ ಕೇಂದ್ರ ಸರ್ಕಾರ ತನ್ನ ಆತ್ಮನಿರ್ಭರ ಭಾರತ ಯೋಜನೆಯ ಮೂಲಕವೇ ಉತ್ತರ ಕೊಡಲು ಮುಂದಾಗಿದೆ.