ನವದೆಹಲಿ-ದೇಶದ ಪ್ರಧಾನಿ ಮತ್ತೊಮ್ಮೆ ತಮ್ಮ ಪವರ್ ಫುಲ್ ನಿರ್ಧಾರದಿಂದ ಅಚ್ಚರಿ ಮೂಡಿಸಿದ್ದಾರೆ. ದೇಶದ ಆರ್ಥಿಕತೆಗೆ ಬಲ ತುಂಬುವ ಜೊತೆ ಕೆಂಪು ರಾಷ್ಟ್ರದ ಚೀನಾದ ಆಟಾಟೋಪಕ್ಕೆ ಬ್ರೇಕ್ ಹಾಕಿದ್ದಾರೆ. ಚೀನಾದ ಬರೋಬ್ಬರಿ 59 ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದೆ. ಬಹು ಜನಪ್ರಿಯ ಅಪ್ಲಿಕೇಷನ್ ಆದ ಟಿಕ್ ಟಾಕ್ ಜೊತೆ ಯುಸಿ ಬ್ರೌಷರ್ ಸೇರಿದಂತೆ ಒಟ್ಟು 59 ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಲಾಗಿದೆ.
ದೇಶದ ಸೌಹಾರ್ಧತೆ, ಭದ್ರತೆಗೆ ಮಾರಕವಾದ ಅಪ್ಲಿಕೇಶನ್ ಗಳು ಬ್ಯಾನ್
ಒಟ್ಟು 59 ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಲಾಗಿದ್ದು, ಇವುಗಳು ದೇಶದ ಸೌಹಾರ್ದತೆ,ಭಾವೈಕ್ಯತೆಗೆ ಧಕ್ಕೆ ತರುತ್ತಿವೆ. ಅದರ ಜೊತೆ ದೇಶದ ರಕ್ಷಣಾ ಇಲಾಖೆಯ ಮೇಲೂ ಕೆಟ್ಟ ಪರಿಣಾಣ ಬೀರುವುದರಿಂದ ಇವುಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ .
ಬ್ಯಾನ್ ಆದ ಅಪ್ಲೀಕೇಷನ್ ಗಳು
1.TIKTOK
2.SHAREIT
3.KWAI
4.UC Browser
5.Baidu map
6.Shein
7.Clash of kings

ಮುಂತಾದ ಒಟ್ಟು 59 ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ.