ಅಮೇರಿಕಾ- ಅದೃಷ್ಟ ಕೈ ಹಿಡಿಯುತ್ತೆ ಅಂತಾರಲ್ಲ, ಇಲ್ಲಿ ಅದೃಷ್ಟ ಕೈ ಹಿಡಿದಿಲ್ಲ, ಬದಲಾಗಿ ಲಕ್ ಅನ್ನೋದು ಇಡೀ ಕುಟುಂಬದ್ದೆ ಕೈ ಹಿಡಿದಿದೆ. ಅಮೇರಿಕಾದ ಅರಿಜೋನ ಲಾಟರಿಯ ಮೆಗಾ ಮಿಲಿಯನ್ ಲಾಟರಿಯ ಐದು ನಂಬರ್ ಒಂದೇ ಜೋಡಿಯ ಪಾಲಾಗಿದ್ದು, ಬರೋಬ್ಬರಿ 410 ಮಿಲಿಯನ್ ಡಾಲರ್ ಅಂದ್ರೆ, ಅಂದಾಜು 3000 ಕೋಟಿಗೂ ಅಧಿಕ ಹಣವನ್ನು ಗೆದ್ದಿದ್ದಾರೆ.

ದಂಪತಿ ಈ ಲಾಟರಿ ಗೆದ್ದು ಅಮೇರಿಕಾದಲ್ಲಿ ಹವಾ ಕ್ರಿಯೆಟ್ ಮಾಡಿದ್ದಾರೆ. 70 ವರ್ಷದ ಹಿರಿಯ ಹಾಗೂ 63 ವರ್ಷದ ಮಹಿಳೆ ಈ ಲಾಟರಿ ಗೆದ್ದಿದ್ದಾರೆ. ಮೇ 27ಕ್ಕೆ ಮಹಿಳೆಗೆ ಎಡಗೈ ತುರಿಸುತ್ತಿತ್ತಂತೆ, ಇದು ಅದೃಷ್ಟದ ಸಂಕೇತ ಅಂತ ತಿಳಿದು ಈ ದಂಪತಿ ಲಾಟರಿ ಟಿಕೆಟ್ ಖರೀದಿಸಿದ್ರು.ಅಲ್ಲದೇ ಅವರ ಕುಟುಂಬದವರ ಜನುಮದಿನಗಳಿಗೆ ಆಧರಿಸಿ ಲಾಟರಿ ಟಿಕೆಟ್ ಖರೀದಿಸಿದ್ರು. ಜೂನ್ 10 ರಂದು ಲಾಟರಿ ಟಿಕೆಟ್ ನ ಡ್ರಾ ಇತ್ತು. ಈ ವೇಳೆ ಈ ದಂಪತಿ ಬರೋಬ್ಬರಿ 410 ಮಿಲಿಯನ್ ಡಾಲರ್ ಅಂದ್ರೆ 3000 ಕೋಟಿಗೂ ಅಧಿಕ ಹಣ ಗೆದ್ದಿರುವುದು ಗೊತ್ತಾಗಿದೆ.38 ವರ್ಷದಿಂದಲೂ ಲಾಟರಿ ಖರೀದಿಸುವ ಈ ದಂಪತಿಗಳ ಹೆಸರು ಬಹಿರಂಗಪಡಿಸುವಂತಿಲ್ಲ.

ಹಾಗಂತ ಈ ದಂಪತಿಗಳಿಗೆ ಸಂಪೂರ್ಣ ಮೂರು ಸಾವಿರ ಕೋಟಿಯೂ ಕೈಗೆ ಸಿಗುವುದಿಲ್ಲ. ಎಲ್ಲಾ ಲೆಕ್ಕಾಚಾರದ ನಂತರ 319 ಮಿಲಿಯನ್ ಡಾಲರ್ ಅಂದ್ರೆ ದಂಪತಿಗಳ ಪಾಲಿನ ಮೊತ್ತ 2400 ಕೋಟಿ ಸಿಗುತ್ತದೆ. ಇದರಲ್ಲೂ ಕೂಡ ತೆರಿಗೆಗಳನ್ನು ಕಟ್ಟಬೇಕಾಗುತ್ತೆ.
570 ಕೋಟಿ ಫೆಡರಲ್ ಟ್ಯಾಕ್ಸ್ ಕಟ್ಟಬೇಕು
100 ಕೋಟಿಯಷ್ಟು ರಾಜ್ಯ ತೆರಿಗೆ ಪಾವತಿಸಬೇಕು
ದಂಪತಿಗಳಿಗೆ ಸಿಗಲಿದೆ 1750 ಕೋಟಿ ರೂಪಾಯಿ
ದಂಪತಿಗಳು ಲಾಟರಿ ಟಿಕೆಟ್ ಪಡೆದು ಗೆದ್ದ ಹಣದಲ್ಲಿ 570 ಕೋಟಿಯಷ್ಟು ಫೆಡರಲ್ ಟ್ಯಾಕ್ಸ್ ರೂಪದಲ್ಲಿ ಕಟ್ಟಬೇಕು. ರಾಜ್ಯ ತೆರಿಗೆಯ ರೂಪದಲ್ಲಿ 100 ಕೋಟಿ ರೂಪಾಯಿ ಕಟ್ಟಬೇಕು. ಹೀಗೆ ನಿಯಮಾನುಸಾರ ಎಲ್ಲಾ ತೆರಿಗೆಗಳನ್ನು ಕಟ್ಟಿದ ನಂತರ ಕೈಗೆ 1750 ಕೋಟಿ ರೂಪಾಯಿ ದಂಪತಿಗೆ ಸಿಗುತ್ತೆ.ವೃದ್ಧಾಪ್ಯದಲ್ಲಿ ದಂಪತಿಯ ಕೈಗೆ ಹಣ ಬಂದಿದೆ. ಇದರಲ್ಲಿ ಮಕ್ಕಳ,ಮೊಮ್ಮಕ್ಕಳ ಜೀವನವನ್ನು ಕಟ್ಟುವುದು ಇವರ ಉದ್ದೇಶವಾಗಿದೆ. ಜೊತೆಗೆ ಕೆಲಸ ವ್ಯವಹಾರಗಳಲ್ಲಿ ಹಣ ತೊಡಗಿಸಲು ಇವರು ಮುಂದಾಗಲಿದ್ದಾರೆ ಅಂತ ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಈ ಸುದ್ದಿ ಈಗ ವಿಶ್ವದ ವಾವ್ ಫ್ಯಾಕ್ಟರ್ ಆಗಿದೆ.