ಬೆಂಗಳೂರು-ರಾಜ್ಯದಲ್ಲಿ ಕರೊನಾದ ಅಟ್ಟಹಾಸ ಮಿತಿ ಮೀರಿ ಹೋಗುತ್ತಿದೆ. ಕೊರೊನಾ ಕೇಸ್ ಗಳು ಇಂದು ಸಾವಿರದ ಗಡಿ ದಾಟಿ ಮುನ್ನುಗ್ಗಿವೆ. ರಾಜ್ಯದಲ್ಲಿ ಇಂದು ಬರೋಬ್ಬರಿ 1267ಕೇಸ್ ದಾಖಲಾಗಿವೆ.
ಬೆಚ್ಚಿ ಬಿದ್ದ ರಾಜಧಾನಿ ಬೆಂಗಳೂರು..!
ಕೊರೊನಾದ ಹಾಟ್ ಸ್ಪಾಟ್ ಆಯ್ತು ಸಿಲಿಕಾನ್ ಸಿಟಿ
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ತನ್ನ ಕರಾಳ ಛಾಯೆಯನ್ನು ಮುಂದುವರಿಸಿದೆ. ಕಬಂಧಬಾಹುಗಳಿಂದ ಉದ್ಯಾನನಗರಿಯ ಜನರನ್ನು ಬಂಧಿಯಾಗಿಸುತ್ತಿದೆ. ಜೂನ್ 27ರಂದು 596 ಪ್ರಕರಣಗಳು ದಾಖಲಾಗಿದ್ರೆ, ಇಂದು ಬರೋಬ್ಬರಿ 783 ಪ್ರಕರಣಗಳು ವರದಿಯಾಗಿವೆ.

ದಕ್ಷಿಣ ಕನ್ನಡದಲ್ಲಿ 97 ಪ್ರಕರಣ ದಾಖಲು
ರಾಜಧಾನಿ ಹೊರತು ಪಡಿಸಿದ್ರೆ ದಕ್ಷಿಣ ಕನ್ನಡದಲ್ಲಿ 97 ಪ್ರಕರಣಗಳು ದಾಖಲಾಗಿವೆ. ಬಳ್ಳಾರಿಯಲ್ಲಿ 71, ಉಡುಪಿಯಲ್ಲಿ 40, ಕಲಬುರಗಿ 34, ಹಾಸನ 31 ಗದಗ 30 ಪ್ರಕರಣಗಳು ದಾಖಲಾಗಿವೆ. ಇಂದು ರಾಮನಗರ, ಚಾಮರಾಜನಗರ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಪ್ರಕರಣಗಳು ಏರಿಕೆ ಕಂಡಿವೆ.
ರಾಜ್ಯದಲ್ಲಿ 7507 ಜನರು ಬಿಡುಗಡೆ
ಈ ಮೂಲಕ ಈ ವರೆಗೆ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 13190, ಇದರಲ್ಲಿ 7507 ಜನರು ಬಿಡುಗಡೆಯಾಗಿದ್ದಾರೆ. ಇದು ರಾಜ್ಯದಾದ್ಯಂತ ಒಟ್ಟು 220 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ. ಈಗ ಇರುವ ಸಕ್ರೀಯ ಪ್ರಕರಣಗಳ ಸಂಖ್ಯೆ 5472.

5,95,470 ಜನರ ಪರೀಕ್ಷೆ
5,66,543 ಜನರಿಗೆ ನೆಗೆಟಿವ್
ರಾಜ್ಯದಲ್ಲಿ ಈವರೆಗೆ ಒಟ್ಟು 5,95,470 ಜನರನ್ನು ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ 5,66,543 ಜನರಿಗೆ ನೆಗೆಟಿವ್ ಬಂದಿದೆಯೆಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಕೋವಿಡ್ 19 ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನತೆ ಭಯಭೀತರಾಗಿದ್ದಾರೆ. ದಿನನಿತ್ಯದ ಓಡಾಟಕ್ಕೂ ಕೂಡ ಜನರೇ ಕೊಂಚ ಬ್ರೇಕ್ ಹಾಕಿದ್ರೆ ಉತ್ತಮ.