ಲಂಡನ್- ಕೊರೊನಾದಿಂದ ವಿಶ್ವವೇ ನಲುಗಿ ಹೋಗಿದೆ. ಇದರ ಬೆನ್ನಲ್ಲೇ ಬ್ರಿಟನ್ ನಲ್ಲಿ ಕೊರೊನಾದ ಎರಡನೆ ಅಲೆ ಆರಂಭವಾಗಿದೆ. ಅದರಲ್ಲೂ ಎರಡನೇ ಅಲೆ ಈ ಹಿಂದಿನ ಹರಡುವಿಕೆಗಿಂತ ಶೇಕಡಾ 70ರಷ್ಟು ವೇಗವಾಗಿ ಹರಡುತ್ತೆ ಎನ್ನಲಾಗಿದ್ದು, ಜೊತೆಗೆ ಕೊರೊನಾ ವೈರಸ್ ರೂಪಾಂತರ ಗೊಂಡಿದೆ ಅಂತ ವಿಶ್ಲೇಷಿಸಲಾಗುತ್ತಿದೆ.
ಜಾರಿಯಾಗುತ್ತಾ ನೈಟ್ ಕರ್ಫ್ಯೂ!?
ರೂಪಾಂತರಗೊಂಡಿರುವ ಕೊರೊನಾ ಎರಡನೇ ಅಲೆ ಭಾರತದಲ್ಲೂ ಭೀತಿ ಉಂಟುಮಾಡಿದೆ.ಇದರಿಂದ ನೈಟ್ ಕರ್ಫ್ಯೂ ಜಾರಿಗೊಳಿಸುವುದಕ್ಕೆ ಸರ್ಕಾರಗಳು ಚಿಂತನೆ ನಡೆಸಿದರೂ ಅಚ್ಚರಿಯಿಲ್ಲ. ಕ್ರಿಸ್ಮಸ್ ಮತ್ತು ಹೊಸ ವರ್ಷದ ವೇಳೆ ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ಚಿಂತಿಸುವ ಸಾಧ್ಯತೆಯಿದ್ದು, ಇಂದು ನಾಳೆಯೊಳಗೆ ಈ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.