ಅಮೇರಿಕಾ- ಕೊರೊನಾದಿಂದ ಹೇಗಪ್ಪಾ ಹೊರಗೇ ಬರೋದು, ಮತ್ತೆ ವಿಶ್ವ ಮೊದಲಿನಂತಾಗೋದಿಲ್ವಾ ಅನ್ನುವ ಯೋಚನೆಗಳ ನಡುವೆಯೇ ಆ ಒಂದು ಮೆಡಿಕಲ್ ಬಿಲ್ ಜಗತ್ತನೇ ಬೆಚ್ಚಿ ಬೀಳಿಸಿದೆ. ಅಮೇರಿಕಾದಲ್ಲಿನ ಸೀಟಲ್ ನಗರದಲ್ಲಿನ ಒಂದು ಕೇಸ್ ಈಗ ಮಿರಾಕಲ್ ಕೇಸ್ ಅಂತನೇ ಕರೆಯಲ್ಪಡುತ್ತಿದೆ. 70 ವರ್ಷದ ಮೈಕೆಲ್ ಪ್ಲೋರ್ ಕೊರೊನಾದಿಂದ ಎದ್ದು ಕೂತಾಗ ಬಿಲ್ ಬರೋಬ್ಬರಿ ಎಂಟು ಕೋಟಿಯಾಗಿತ್ತು.

ವೈರಸ್ ನ ತೀವ್ರತೆಗೆ ಸಿಲುಕಿದ್ದ ಮೈಕೆಲ್ ಪ್ಲೋರ್ ಸತತವಾಗಿ 62 ದಿನಗಳ ಕಾಲ ಆಸ್ಪತ್ರೆಯಲ್ಲಿದ್ರು. ಇವರನ್ನು ತೀವ್ರ ನಿಗಾವಹಿಸಿರುವ ಐಸೋಲೇಷನ್ ಇಂಟೆನ್ಸಿವ್ ವಾರ್ಡ್ ನಲ್ಲಿ ಇರಿಸಲಾಗಿತ್ತು.ಸರಿ ಸುಮಾರು 42 ದಿನಗಳಷ್ಟು ಕಾಲ ಆತ ಈ ಇಂಟೆನ್ಸಿವ್ ವಾರ್ಡ್ ನಲ್ಲಿದ್ದು, ಇದರ ಒಂದು ದಿನದ ಚಾರ್ಜ್ ಅಂದಾಜು ಏಳು ಲಕ್ಷಕ್ಕೂ ಹೆಚ್ಚಾಗುತ್ತಿತ್ತು. 42 ದಿನಗಳಿಗೆ ಒಟ್ಟು 3 ಕೋಟಿ 10ಲಕ್ಷದಷ್ಟು ಈ ವಾರ್ಡ್ ನ ಬಿಲ್ ಪಾವತಿಸಬೇಕಾಗಿತ್ತು.
ಈತನಿಗೆ 29 ದಿನಗಳ ಕಾಲ ಮೆಕಾನಿಕಲ್ ವೆಂಟಿಲೇಟರ್ ಅಳವಡಿಸಲಾಗಿತ್ತು. ಇದರ ಒಂದು ದಿನದ ಮೊತ್ತ 2 ಲಕ್ಷದ ಹತ್ತು ಸಾವಿರ ರೂಪಾಯಿಯಾಗಿತ್ತು. ಒಟ್ಟು 29 ದಿನಗಳಿಗೆ ಆಸ್ಪತ್ರೆಯವರು ಮಾಡಿದ ಚಾರ್ಜ್ ಬರೋಬ್ಬರಿ 62 ಲಕ್ಷಕ್ಕೂ ಅಧಿಕವಾಗಿತ್ತು.
ಹೀಗೆ ಬರೋಬ್ಬರಿ 8 ಕೋಟಿಯ ಬಿಲ್ ನೋಡಿದಾಗ ಕರೊನಾ ಗೆದ್ದ ಪ್ಲೋರ್ ಗೆ ನಾನ್ಯಾಕೆ ಬದುಕಿದೆ ಅಂತ ಅನ್ನಿಸಿದ್ಯಂತೆ. ಅಂತರಾಷ್ಟ್ರೀಯ ಮಾದ್ಯಮಗಳಲ್ಲಿ ಪ್ರಕಟವಾಗಿರುವ ಈ ವ್ಯಕ್ತಿಯ ವರದಿಗಳು ಈಗ ವಿಶ್ವಮಟ್ಟದ ಅಚ್ಚರಿಗೆ ಕಾರಣವಾಗಿದೆ.