ಮದುರೈ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಕೂಡ ಜನ ಮಾತ್ರ ಬುದ್ದಿ ಕಲಿಯುತ್ತಿಲ್ಲ.. ಮಾಸ್ಕ್ ಹಾಕೊಳ್ಳದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ. ಇದಕ್ಕಾಗಿ ಮದುರೈನ ಹೋಟೆಲ್ ಒಂದು ಪರೋಟ ಮಾಸ್ಕ್ ಮಾಡಿ ಕರೊನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ..
ಹೋಟೆಲ್ ಗೆ ಬರುವ ಎಲ್ಲಾ ಗ್ರಾಹಕರಿಗೆ ಈ ಮಾಸ್ಕ್ ಪರೋಟವನ್ನು ನೀಡಲಾಗುತ್ತೆ. ಜೊತೆಗೆ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿ ಅಂತ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಈ ಪರೋಟ ಮಾಸ್ಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ..
ಈ ಹಿಂದೆ ಕೋಲ್ಕತ್ತಾದಲ್ಲಿ ಕೊರೊನಾ ಜಾಗೃತಿ ಮೂಡಿಸುವ ಒಂದು ಸ್ವೀಟ್ ತಯಾರು ಮಾಡಲಾಗಿತ್ತು..