ಮಂಗಳೂರು-ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿಯವರಿಗೂ ಕೊರೊನಾ ಅಂಟಿಕೊಂಡಿದೆ. ಭರತ್ ಶೆಟ್ಟಿಯವರೇ ಟ್ವೀಟ್ ಮಾಡಿ ತನಗೆ ಕೊರೊನಾ ಪಾಸಿಟಿವ್ ಅಂತ ಘೋಷಿಸಿಕೊಂಡಿದ್ದಾರೆ.ಕೊರೊನಾದ ಸಂಧಿಗ್ಧ ಪರಿಸ್ಥಿತಿಯಲ್ಲಿ ನಿರಂತರವಾಗಿ ಭರತ್ ಶೆಟ್ಟಿ ಜನರೊಂದಿಗೆ ಓಡಾಡಿಕೊಂಡಿದ್ರು.ಆದರೆ ಕೊರೊನಾ ಸೋಂಕು ಶಾಸಕರಿಗೆ ಹೇಗೆ ಬಂತು ಅನ್ನೋದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಕೊರೊನಾ ಪಾಸಿಟಿವ್ ಬಂದಿರುವುದನ್ನು ಭರತ್ ಶೆಟ್ಟಿ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದು ಮಾತ್ರವಲ್ಲದೇ, ತಾನು ಚೇತರಿಸಿಕೊಳ್ಳುತ್ತಿದ್ದೇನೆ ಅಂತನೂ ಹಾಕಿದ್ದಾರೆ. ಕೆಲ ದಿನಗಳ ಕಾಲ ಚಿಕಿತ್ಸೆಯನ್ನು ಪಡೆಯುತ್ತೇನೆ, ಎಲ್ಲರೂ ಕೂಡ ಜಾಗರೂಕರಾಗಿರಿ, ಕೈಗಳನ್ನು ತೊಳೆಯುತ್ತಿರಿ, ನಿಮ್ಮ ರಕ್ಷಣೆಯನ್ನು ನೀವು ಮಾಡಿಕೊಳ್ಳಿ, ಸದಾ ಎಚ್ಚರದಿಂದಿರಿ ಅನ್ನುವ ಸಂದೇಶವನ್ನು ಜನರಿಗೆ ಕಳುಹಿಸಿದ್ದಾರೆ.

ಈ ಮೂಲಕ ಜನಪ್ರತಿನಿಧಿಯಾಗಿ ತನಗೆ ಬಂದ ಸಂಕಷ್ಟವನ್ನು ಧೈರ್ಯದಿಂದ ಭರತ್ ಶೆಟ್ಟಿ ಎದುರಿಸುವುದಕ್ಕೆ ಮುಂದಾಗಿದ್ದಾರೆ.