ಚೆನ್ನೈ,ಅಹಮದಾಬಾದ್: ಕೊರೊನಾ ರೋಗದ ರುದ್ರ ತಾಂಡವದ ನಡುವೆಯೇ ಬಂದ ಯೋಗಾ ಡೇ, ರೋಗಿಗಳಿಗೆ ನವಚೈತನ್ಯ ತುಂಬಿದೆ. ಕೋವಿಡ್ 19 ರೋಗಿಗಳಿಗೆ ಕೇರ್ ಸೆಂಟರ್ ಗಳಲ್ಲೇ ಯೋಗಾಭ್ಯಾಸ ಮಾಡಿಸಲಾಯ್ತು.ಚೆನ್ನೈನಲ್ಲಿ ಪಿಪಿಇ ಕಿಟ್ ಗಳನ್ನು ಧರಿಸಿ, ಕೊರೊನಾ ರೋಗಿಗಳಿದ್ದ ಕೊಠಡಿಗೆ ಯೋಗಾಭ್ಯಾಸ ಹೇಳಿಕೊಡುವ ಗುರುಗಳು ಆಗಮಿಸಿದ್ರು. ಅಲ್ಲಿದ್ದ ಎಲ್ಲಾ ರೋಗಿಗಳಿಗೂ ಕೂಡ ಅಗತ್ಯವಿರುವ ಆಸನಗಳನ್ನು ಭೋದಿಸಿದರು.

ಗುಜರಾತ್ ನ ಅಹಮದಾಬಾದ್ ನಲ್ಲಿ ಡಾಕ್ಟರ್ ಸೋಲಂಕಿ ಎಂಬ ವೈದ್ಯ, ರೋಗಿಗಳನ್ನು ಬೆಡ್ ನಲ್ಲೇ ಕುಳ್ಳಿರಿಸಿಕೊಂಡು, ಯೋಗ ಪಾಠ ಹೇಳಿಕೊಟ್ಟರು. ಇದರಿಂದಾಗಿ ಕೆಲವರಿಗೆ ಈಗಾಗ್ಲೇ ನೆರವಾಗಿದ್ದು, ಉಸಿರಾಡಲು ಕಷ್ಟಪಡುತ್ತಿದ್ದ ಕೆಲವರಿಗೆ ಯೋಗಾಭ್ಯಾಸದಿಂದ ಉಪಯೋಗವಾಗಿದೆ ಎನ್ನಲಾಗಿದೆ.

ಈ ಮೂಲಕ ಕೊರೊನಾದ ಭೀಕರತೆಯ ನಡುವೆಯೇ ಯೋಗಾಡೇ ಬಂದಿರುವುದರಿಂದ, ರೋಗಿಗಳಿಗೆ ಹೊಸ ಉತ್ಸಾಹ ಬಂದಿದೆ. ಅಲ್ಲದೇ ಕೊರೊನಾದಿಂದ ದೂರವುಳಿಯುವುದಕ್ಕೆ ಯೋಗದಿಂದ ನೆರವು ಸಿಗುತ್ತದೆ, ಜೊತೆಗೆ ಉಸಿರಾಟ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಆದ್ದರಿಂದ ಯೋಗಾ ಡೇ ಕೊರೊನಾ ರೋಗಿಗಳಲ್ಲಿ ಯೋಗವನ್ನು ಪ್ರತಿನಿತ್ಯ ಮಾಡುವಂತೆ ಪ್ರೇರೇಪಿಸಿದೆ, ಇದು ಕೂಡ ಹಲವರಿಗೆ ಕೊರೊನಾ ವಿರುದ್ಧದ ಯುದ್ಧದಲ್ಲಿ ಗೆಲ್ಲಲು ನೆರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.