ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಮೊದಲ ಪೊಲೀಸ್ ಅಧಿಕಾರಿ ಬಲಿಯಾಗಿದ್ದಾರೆ. ಬೆಂಗಳೂರಿನ ವಿವಿಪುರಂನ ಸಂಚಾರಿ ಠಾಣೆಯಲ್ಲಿ ASI ಆಗಿ ಕೆಲಸ ಮಾಡುತ್ತಿದ್ದ ಇವರು ಇಂದು ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಕುಣಿಗಲ್ ಮೂಲದವರಾದ ಇವರು ಸುಂಕದಕಟ್ಟೆಯಲ್ಲಿ ವಾಸವಾಗಿದ್ದರು. ಜೂನ್ 11 ರಿಂದ ರಜೆಯಲ್ಲಿದ್ದ ಇವರು 14 ರಂದು ಮನೆಯಲ್ಲೇ ಕುಸಿದು ಬಿದ್ದಿದ್ದರು.. ಬಳಿಕ ಇವರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಇವತ್ತು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಇವರ ಮೃತದೇಹದ ಸ್ವಾಬ್ ಟೆಸ್ಟ್ ಮಾಡಿಸಿದಾಗ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಸದ್ಯ ಮನೆಯ ಐವರು ಸದಸ್ಯರನ್ನು ಹೋಮ್ ಕ್ವಾರಂಟೇನ್ ಮಾಡಲಾಗಿದೆ. ಇನ್ನು ವಿವಿಪುರಂ ಠಾಣೆಯ ಮತ್ತೊಬ್ಬ ASI ಗೂ ಸೋಂಕು ತಗುಲಿದೆ ಎನ್ನಲಾಗಿದೆ. ಇದೀಗ ವಿವಿಪುರಂ ಸಂಚಾರಿ ಠಾಣೆಯನ್ನು ಕಂಪ್ಲೀಟ್ ಸೀಲ್‌ಡೌನ್ ಮಾಡಲಾಗಿದೆ.