ನವದೆಹಲಿ : ಐಪಿಎಲ್ ಸ್ಪಾಟ್ ಪಿಕ್ಸಿಂಗ್ ಹಗರಣದಲ್ಲಿ ಸಿಕ್ಕು ಕ್ರಿಕೆಟ್ ನಿಂದ ಬ್ಯಾನ್ ಆಗಿರೋ ಟೀಂ ಇಂಡಿಯಾ ವೇಗದ ಬೌಲರ್ ಶ್ರೀಶಾಂತ್ ಮತ್ತೆ ಟೀಂಗೆ ಮರಳುವ ಬಗ್ಗೆ ಸುಳಿವು ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್ ಟೀಮ್ ನಲ್ಲಿ ಆಡ್ತಿದ್ದ ಶ್ರೀಶಾಂತ್ ಐಪಿಎಲ್ ಸ್ಪಾಟ್ ಪಿಕ್ಸಿಂಗ್ ಸುಳಿಗೆ ಸಿಲುಕಿದ್ರು. ಈ ಕಾರಣದಿಂದಾಗಿ ಶ್ರೀಶಾಂತ್ ರವರನ್ನ ಕ್ರಿಕೆಟ್ ನಿಂದಲೇ 2013 ರಲ್ಲಿ ಬ್ಯಾನ್ ಮಾಡಿ ಬಿಸಿಸಿಐ ಆದೇಶ ಹೊರಡಿಸಿತ್ತು. ಹೀಗಾಗಿ ಟೀಂ ಇಂಡಿಯಾದ ಅಗ್ರೆಸಿವ್ ಬೌಲರ್ ಶ್ರೀಶಾಂತ್ ಕ್ರಿಕೆಟ್ ಕೆರಿಯರ್ ಮುಗಿದೇ ಹೋಯ್ತು ಎಂದೇ ಲೆಕ್ಕಾರ ಹಾಕಲಾಗಿತ್ತು. ಆದ್ರೆ ಕಳೆದ ವರ್ಷ ಶ್ರೀಶಾಂತ್ ಕ್ರಿಕೆಟ್ ಬ್ಯಾನ್ ಅವಧಿಯನ್ನ ಬಿಸಿಸಿಐ7 ವರ್ಷಕ್ಕೆ ಇಳಿಸಿತ್ತು.

ಈವರ್ಷ ಸೆಪ್ಟೆಂಬರ್ 13ಕ್ಕೆ ಶ್ರೀಶಾಂತ್ ಕ್ರಿಕೆಟ್ ಬ್ಯಾನ್ ಅವಧಿ ಮುಕ್ತಾಯಗೊಳ್ತಿದೆ. ಈ ಹಿನ್ನಲೆ ಶ್ರೀಶಾಂತ್ ತಮ್ಮ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸೋ ತವಕದಲ್ಲಿದ್ದಾರೆ. ಈಬಗ್ಗೆ ರಾಷ್ಟ್ರೀಯ ಸುದ್ದಿವಾಹಿಸಿಗೆ ಹೇಳಿಕೆ ನೀಡಿರೋ ಶ್ರೀಶಾಂತ್ ತಾನು ಕ್ರಿಕೆಟ್ ನಿಂದ ಬ್ಯಾನ್ ಆದ್ರೂ ನಿರಂತರ ಅಭ್ಯಾಸ ಮಾಡುತ್ತಿದ್ದು, ಫಿಟ್ನೆಸ್ ಕಾಯ್ದು ಕೊಂಡಿರೋದಾಗಿ ತಿಳಿಸಿದ್ದಾರೆ. ಮಾತ್ರವಲ್ಲ ಎಲ್ಲಾ ಅಂದುಕೊಂಡಂತೆ ಆದ್ರೆ ಈವರ್ಷದ ಸೆಪ್ಟೆಂಬರ್ ತಿಂಗಳ ನಂತರ ಕೇರಳ ರಣಜಿ ಟೀಂನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ರಣಜಿ ಟೀಂನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಮತ್ತೆ ನೀಲಿ ಜರ್ಸಿ ಧರಿಸುವ ವಿಶ್ವಾಸದಲ್ಲಿ ಶ್ರೀಶಾಂತ್ ಇದ್ದಾರೆ. ಶ್ರೀಶಾಂಕ್ ಕಂಬ್ಯಾಕ್ ಸುದ್ದಿ ಈಗ ಅಭಿಮಾನಿಗಳಿಗೆ ಸಂತಸ ತರಿಸಿದೆ. .