ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸದ್ಯ 77ರ ಹರೆಯ. ಆದ್ರೆ ಅವರ ಕಾರ್ಯವೈಖರಿ, ಅವರ ದಿನಚರಿ ನೋಡಿದ್ರೆ ಈಗಿನ್ನೂ 27 ಇರಬೇಕು ಅನ್ನುವಷ್ಟರ ಹುರುಪು ಬಿಎಸ್‌ವೈರದ್ದು. ಅದ್ರಲ್ಲೂ ಮುಖ್ಯಮಂತ್ರಿಯಾದ ಮೇಲಂತೂ ರೆಸ್ಟ್ ಅನ್ನೋದು ಯಡಿಯೂರಪ್ಪ ಡಿಕ್ಷನರಿಯಲ್ಲೇ ಇಲ್ಲ. ದಿನದ 24 ಗಂಟೆಯೂ ರಾಜ್ಯಭಾರದ್ದೇ ಚಿಂತೆ ಬಿಎಸ್ವೈರನ್ನ ಕಾಡುತ್ತಿರುತ್ತೆ. ಫ್ಯಾಮಿಲಿಜೊತೆ ಕಾಲ ಕಳೆಯಬೇಕು, ಮನೆಮಂದಿಯನ್ನ ಮಾತನಾಡಿಸ್ಬೇಕು. ಇಲ್ಲಾ ಒಂದರ್ಧಗಂಟೆ ಕುಳಿತು ಟಿವಿ ನೋಡ್ಬೇಕು, ಯಾವುದೋ ಒಂದು ಬುಕ್ ಓದಿ ಮುಗಿಸಬೇಕು ಅಂದ್ರೂ ನಾಡದೊರೆಗೆ ಟೈಂ ಸಿಗೋದೆ ಇಲ್ಲ. ಆದ್ರೆ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಚೀನಾ ಮಹಾಮಾರಿ ಕೊರೋನಾ ವೈರಸ್ ಬಿಎಸ್ವೈಗೆ ಕೊಂಚ ರಿಲೀಫ್ ನೀಡಿದೆ. ಸಿಕ್ಕ ರಿಲೀಫ್ ಟೈಮ್ಅನ್ನ ಬಿಎಸ್ವೈ ತನ್ನ ಬಹುದಿನದ ಕನಸು ನನಸಾಗಿಸಿಕೊಳ್ಳಲು ಬಳಸಿಕೊಳ್ತಿದ್ದಾರೆ.

ಇದನ್ನ ಕೇಳಿ ನೀವು ಕಂಡಿತ ಆಶ್ಚರ್ಯಗೊಂಡಿರ್ತೀರಾ. ಕಾರಣ ಕೊರೋನಾ ಬಂದಮೇಲೆ ಮುಖ್ಯಮಂತ್ರಿಯವರ ತಲೆಬಿಸಿ ಜಾಸ್ತಿಯಾಗಿರುತ್ತೆ ಅಲ್ವಾ ? ಅದ್ರಲ್ಲೂ ರಾಜ್ಯದಲ್ಲಿ ದಿನದಿನಕ್ಕೂ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿರೋ ಈ ಟೈಮ್‌ನಲ್ಲಿ ಸಿಎಂಗೆ ಬಿಡುವು ಸಿಗೋದಾ ಅನ್ನೋ ಯೋಚನೆ ನಿಮಗೆ ಕಂಡಿತಾ ಬಂದಿರುತ್ತೆ. ಆದ್ರೆ ಇಂಥಾ ಸಂಕಷ್ಟದ ಸ್ಥಿತಿಯಲ್ಲಿ ಸಿಎಂಗೆ ಬಯಕೆ ಇಲ್ಲದಿದ್ರೂ ರಿಲೀಫ್ ಸಿಕ್ಕಿದೆ. ಸಿಎಂ ಕಚೇರಿ ಹಾಗೂ ಆಪ್ತವಲಯದಲ್ಲಿರೋ ಕೆಲ ಮಂದಿಗೆ ಕೊರೋನಾ ಪಾಸಿಟಿವ್ ಬಂದ ಪರಿಣಾಮ ಸಿಎಂ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಹೀಗಾಗಿ ಬಯಸದೇ ಸಿಎಂಗೆ ಕೊಂಚ ರಿಲೀಫ್ ಸಿಕ್ಕಿದೆ.
ಸಿಕ್ಕ ರಿಲೀಫ್ ಟೈಮ್‌ನಲ್ಲಿ ಸಿಎಂ ಬಿಎಸ್ ವೈ ತನ್ನ ಬಹುಕಾಲದ ಕನಸುಗಳನ್ನ ಸಾಕಾರಗೊಳಿಸಲು ಬಳಕೆ ಮಾಡಿಕೊಳ್ತಿದ್ದಾರೆ. ಮನೆಯಲ್ಲೇ ಇರುವ ಯಡಿಯೂರಪ್ಪ ‘ಯಯಾತಿ’ ಸಂಬಂಧಿಸಿದ ಕೃತಿಯನ್ನ ಓದಲಾರಂಭಿಸಿದ್ದಾರೆ. ಮರಾಠಿ ಭಾಷೆಯಲ್ಲಿ ವಿ.ಎಸ್.ಖಾಂಡ್ರೇಕರ್ ಬರೆದಿರೋ ಈ ಯಯಾತಿ ಕೃತಿಯ ಕನ್ನಡ ಅವತರಣಿಕೆಯನ್ನ ಬಿಎಸ್ವೈ ಓದುತ್ತಿದ್ದು ಈ ಕುರಿತಾದ ಒಂದು ಫೋಟೋ ಜೊತೆಗೆ ಸಿಎಂ ಟ್ವೀಟ್ ಮಾಡಿದ್ದಾರೆ. “ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು. ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ, ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ದ ಲಾಕ್ ಡೌನ್ ಮತ್ತು ಸ್ವ-ಕ್ವಾರಂಟೈನ್ ನಲ್ಲಿರುವ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿಯ ಜೊತೆಗೆ ಕಳೆಯುತ್ತಿದ್ದೇನೆ.” ಎಂದು ಸಿಎಂ ಟ್ವೀಟ್ ಮಾಡಿದ್ದಾರೆ