ಬೀಜಿಂಗ್ : ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬ ಜಾಯಮಾನ ಕುತಂತ್ರಿ ಚೀನಾದ್ದು. ಗಲ್ವಾನ್ ಕಣಿವೆ ವಿಚಾರದಲ್ಲೂ ಚೀನಾದ ಕಥೆ ಹೀಗೆ ಆಗಿದೆ. ಗಲ್ವಾನ್ ಘರ್ಷಣೆಯಲ್ಲಿ ನಮ್ಮ ಸೈನಿಕರು ಸತ್ತೇ ಇಲ್ಲ. ನಾವೇ ಅಜೇಯರು ಎಂಬಂತಿತ್ತು ಚೀನಾ. ಆದ್ರೆ ಈಗ ಸೈನಿಕರ ಸಮಾಧಿ ಅಸಲಿ ಸತ್ಯವನ್ನ ಜಗತ್ತಿನೆದುರು ಬೆತ್ತಲಾಗಿಸಿದೆ. ಗಲ್ವಾನ್ ಕಣಿವೆ ಘರ್ಷಣೆಯಲ್ಲಿ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ಘಟನೆಯ ಮಾರನೆಯದಿನವೇ ಭಾರತ ಸ್ಪಷ್ಟಪಡಿಸಿತ್ತು. ಆದ್ರೆ ಚೀನಾದ 40ಕ್ಕೂ ಹೆಚ್ಚು ಸೈನಿಕರು ಘರ್ಷಣೆಯಲ್ಲಿ ಬಲಿಯಾಗಿರೋ ಬಗ್ಗೆ ಭಾರತ ಹೇಳಿಕೆ ನೀಡಿತ್ತು. ಆದ್ರೆ ಚೀನಾ ಮಾತ್ರ ಯಾವುದೇ ಪ್ರತಿಕ್ರೀಯೆ ನೀಡದೇ ನಮ್ಮ ಸೈನಿಕರು ಸತ್ತೇ ಇಲ್ಲ ಎಂಬಂತೆ ವರ್ತಿಸಿತ್ತು. ಆದ್ರೆ ತನ್ನ ಮುಖವಾಣಿಯಾದ ಗ್ಲೋಬಲ್ ಟೈಮ್ಸ್‌ನಲ್ಲೂ ಚೀನಾ ತಮ್ಮ ಸೈನಿಕರು ಸತ್ತಿರೋಬಗ್ಗೆ ಸುಳಿವು ಬಿಟ್ಟುಕೊಟ್ಟಿತ್ತು ಚೀನಾ.


ಗಲ್ವಾನ್ ಘರ್ಷಣೆ ವೇಳೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ ಈ ಘರ್ಷಣೆ ವೇಳೆ ಚೀನಾದ ಯಾವ ಯೋಧನು ಸಹ ಮೃತಪಟ್ಟಿಲ್ಲ ಎಂದು ಚೀನಾ ವಾದಿಸುತ್ತಾ ಬಂದಿತ್ತು.ಚೀನಾದಲ್ಲಿ ಗಲ್ವಾನ್ ಕಣಿವೆ ಘರ್ಷಣೆ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಯಾಕಂದ್ರೆ ತನ್ನ ಸೈನಿಕರು ಸತ್ತಿರೋದನ್ನ ಒಪ್ಪಿಕೊಳ್ಳದ ಚೀನಾ ಕುಟುಂಬಸ್ಥರಿಗೂ ತಿಳಿಸದೇ, ಯೋಧರ ಮೃತದೇಹವನ್ನ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಿತ್ತು ಚೀನಾ ಸರ್ಕಾರ. ಆದ್ರೀಗ ಚೀನಾ ಸಾಮಾಜಿಕ ಜಾಲತಾಣದಲ್ಲಿ ಗಲ್ವಾನ್ ಕಣಿವೆಯಲ್ಲಿ ಮೃತರಾದ ಯೋಧರ ಸಮಾಧಿಯ ಚಿತ್ರಗಳು ಹರಿದಾಡ್ತಿದೆ. ದಕ್ಷಿಣದ ಕ್ಸಿನ್ ಜಿಯಾಂಗ್ ಸೇನಾ ವಲಯದಲ್ಲಿ ಸಾಮೂಹಿಕವಾಗಿ ಮೃತ ಯೋಧರ ಸಮಾಧಿಯನ್ನು ಸ್ಥಾಪನೆ ಮಾಡಲಾಗಿದೆ. ಇದರ ಮೇಲೆ ಚೆನ್ ಕ್ಸಿಯಾಂಗ್ ರಾಂಗ್, 19316 ಪಡೆಯ ಯೋಧ. 2020ರ ಜೂನ್ ನಲ್ಲಿ ಭಾರತ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮನಾದ ಸೈನಿಕ ಎಂದು ಬರೆಯಲಾಗಿದೆ. ಹೀಗೆ ಬರೆದ ಫೋಟೋಗಳು ಚೀನಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದು ಚೀನಾ ಸರ್ವಾಧಿಕಾರಿ ಸರ್ಕಾರಕ್ಕೆ ಭಾರೀ ಇರಿಸು ಮುರಿಸಿಗೆ ಕಾರಣವಾಗಿದ್ದು, ಚೀನಾದ ನಿಜಬಣ್ಣ ಜಗತ್ತಿನೆದುರು ಬೆತ್ತಲಾಗಿದೆ.