ದೆಹಲಿ: ದೇಶವನ್ನ ಬಾಧಿಸುತ್ತಿರೋ ಕರೋನಾ ಬಿಕ್ಕಟ್ಟನ್ನ ನಾವು ಅವಕಾಶವನ್ನಾಗಿ ಬದಲಾಯಿಸಿ, ಆತ್ಮನಿರ್ಭರ ಭಾರತ ಕಟ್ಟಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ವಾಣಿಜ್ಯ ಮಂಡಳಿಯ 95ನೇ ವಾರ್ಷಿಕೋತ್ಸವದ ಅಂಗವಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ ದೇಶದ ಜನತೆಗೆ ಸ್ವದೇಶಿ ಪ್ರೇಮದ ಮಂತ್ರ ಬೋಧಿಸಿದ್ದಾರೆ. ದೇಶದ ಜನ ಮಾಡಬೇಕಾದ ಪ್ರಮುಖ ಕೆಲಸವೆಂದರೆ ಸ್ವದೇಶಿ ಉತ್ಪನ್ನಗಳನ್ನ ಹೆಚ್ಚಾಗಿ ಬಳಸುವುದು. ಜೊತೆಗೆ ಇತರರನ್ನೂ ಸ್ವದೇಶಿ ಉತ್ಪನ್ನ ಬಳಸುವಂತೆ ಪ್ರೇರೇಪಿಸುವುದನ್ನ ರೂಢಿಸಿಕೊಳ್ಳಬೇಕು. ಹಾಗೇ ವಿದೇಶದಲ್ಲಿ ಭಾರತದ ವಸ್ಥುಗಳಿಗೆ ಮಾರುಕಟ್ಟೆ ಸಿಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಆತ್ಮ ನಿರ್ಭರ ಭಾರತವನ್ನ ರಚನೆ ಮಾಡಬೇಕೆಂದು ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ. ಇನ್ನು ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ಮಾರ್ಗ ಕರೋನಾ ಬಳಿಕ ನಮಗೆಲ್ಲಾ ದಾರಿದೀಪವಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಈ ಸಮಯದಲ್ಲಿ ಭಾರತವೂ ಇದಕ್ಕೆ ಹೊರತಾಗಿಲ್ಲ. ಭಾರತಕ್ಕೆ ಕರೋನಾ ಮಾತ್ರವಲ್ಲದೇ ಪ್ರವಾಹ, ರೈತರ ಬೆಳೆಗಳ ಮೇಲೆ ಮಿಡತೆ ದಾಳಿ ಆಲಿಕಲ್ಲು ಮಳೆ, ತೈಲ ಬಾವಿಯಲ್ಲಿ ಬೆಂಕಿ, ಸಣ್ಣ ಭೂಕಂಪಗಳು. ಮೇಲಿಂದ ಮೇಲೆ ಚಂಡಮಾರುತಗಳು ಎದುರಾಗ್ತಿದೆ. ಇಂತಪ ಪ್ರಾಕೃತಿಕ ವಿಪತ್ತುಗಳನ್ನ ಎದುರಿಸಿಕೊಂಡೇ ನಾವು ಶಕ್ತಿಶಾಲಿಗಳಾಗಬೇಕು ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಸಂದೇಶ ರವಾನಿಸಿದ್ದಾರೆ. ಪ್ರಧಾನಿ ಮೋದಿ ಪದೇ ಪದೇ ಆತ್ಮನಿರ್ಭರ ಭಾರತದ ಕನಸನ್ನ ಜನರಲ್ಲಿ ಬಿತ್ತುತ್ತಿದ್ದು ಈ ಮೂಲಕ ಪರೋಕ್ಷವಾಗಿ ದೇಶದ ಪರಮ ಶತೃವಾಗಿ ಬದಲಾಗಿರೋ ಚೈನಾ ವಸ್ಥುಗಳನ್ನ ಮಾರುಕಟ್ಟೆಯಿಂದ ಹೊರಹಾಕುವಂತೆ ಜನತೆಗೆ ಸೂಕ್ಷ್ಮವಾಗಿ ಸಂದೇಶ ರವಾನಿಸುತ್ತಿದ್ದಾರೆ.