ಬೆಂಗಳೂರು- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಡಿ ಕೆ ಶಿವಕುಮಾರ್ ಅಧ್ಯಕ್ಷರಾದ ಮೇಲೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಯುವಕರನ್ನು ಸಂಘಟಿಸುವುದು. ಅವರಿಗೆ ಮಾರ್ಗದರ್ಶನ ಮಾಡುವುದು ಇತ್ಯಾದಿಗಳನ್ನು ಮಾಡುತ್ತಲೇ ಇದ್ದಾರೆ.
ಈ ನಡುವೆ ಮುಂದೆ ಬರಲಿರುವ ಶಿರಾ ಕ್ಷೇತ್ರದ ಉಪಚುನಾವಣೆ , ಬಿಬಿಎಂಪಿ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಡಿ ಕೆ ಶಿವಕುಮಾರ್ ಸಕಲ ರೀತಿಯಲ್ಲಿ ಸನ್ನದ್ದರಾಗಿದ್ದಾರೆ. ಹೈಟೆಕ್ ಬಸ್ ನಲ್ಲಿ ಈ ಚುನಾವಣೆಗಳ ಪ್ರಚಾರ ಮಾಡಲು ಮುಂದಾಗಿದ್ದಾರೆ.
ಡಿ ಕೆ ಮನೆಯ ಮುಂದೆ ನಿಂತಿತ್ತು ಹೈಟೆಕ್ ಬಸ್
ಇಂದು ಡಿ ಕೆ ಶಿವಕುಮಾರ್ ಮನೆಯ ಮುಂದೆ ಹೈಟೆಕ್ ಬಸ್ ನಿಂತಿತ್ತು. ಈ ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಬಸ್ ನೊಳಗೆ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಯನ್ನು ಹೊಂದಿದೆ. ಜೊತೆಗೆ ಪ್ರಚಾರದ ಸಮಯದಲ್ಲಿ ಬಸ್ ಟಾಪ್ ಓಪನ್ ಮಾಡಬಹುದು. ಈ ಮೂಲಕ ಬಸ್ ನಿಂದಲೇ ಹೊರಬಂದು, ಜನರೊಂದಿಗೆ ಮಾತನಾಡುವುದು, ಅವರನ್ನು ಉದ್ದೇಶಿಸಿ ಮಾತನಾಡುವುದು ಇತ್ಯಾದಿಗಳನ್ನು ಮಾಡಬಹುದು. ಈ ಬಸ್ ನ ಪರಿಶೀಲನೆಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮಾಡಿದ್ದಾರೆ.

ಯುವಕರನ್ನು ಸಂಘಟಿಸಲು ಪಣ
ಯೂತ್ ಕಾಂಗ್ರೆಸ್ ಚುನಾವಣೆಗೆ ನಿರ್ಧಾರ
ಮುಂದಿನ ದಿನಗಳಲ್ಲಿ ಸ್ಥಳೀಯ ಮಟ್ಟದಿಂದಲೇ ಚುನಾವಣೆಗಳು ಬರಲಿವೆ. ಅದಕ್ಕೂ ಮೊದಲು ಯುವಕರನ್ನು ಕಾಂಗ್ರೆಸ್ ನತ್ತ ಸೆಳೆಯುವ ಪ್ರಯತ್ನ ಮಾಡಬೇಕಿದೆ. ಅದಕ್ಕಾಗಿ ಯೂತ್ ಕಾಂಗ್ರೆಸ್ ಪದಾದಿಕಾರಿಗಳ ಆಯ್ಕೆಯೂ ನಡೆಯಬೇಕಿದೆ. ಹೀಗಾಗಿ ಯುವಕರ ನಾಯಕತ್ವಕ್ಕೆ ಚುನಾವಣೆ ಅನಿವಾರ್ಯವಾಗಿದೆ. ಬೂತ್ ಮಟ್ಟದಿಂದಲೇ ಪಕ್ಷದ ಸಂಘಟನೆ ಆಗಬೇಕೆಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಮೂಲಕ ಡಿ ಕೆ ಶಿವಕುಮಾರ್ ಈಗಾಗ್ಲೇ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚುನಾವಣೆಯ ಉತ್ಸಾಹ ಸೃಷ್ಟಿಸುತ್ತಿದ್ದಾರೆ. ಇದು ಕಾಂಗ್ರೆಸ್ ಗೆ ಎಷ್ಟರಮಟ್ಟಿಗೆ ಪ್ಲಸ್ ಪಾಯಿಂಟ್ ಆಗುತ್ತೆ ಕಾದು ನೋಡಬೇಕು.