ಬೆಂಗಳೂರು :ರಾಜ್ಯದ ಕೆಪಿಸಿಸಿಗೆ ನೂತನ ಸಾರಥಿಯಾಗಿ ನಿಯುಕ್ತಿಗೊಂಡಿರೋ ಡಿ ಕೆ ಶಿವಕುಮಾರ್ ಪದಗ್ರಹಣಕ್ಕೆ ಕೊನೆಗೂ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಡಿಕೆಶಿ ಯಾವಾಗ ಬೇಕಾದ್ರು ಸಮಾರಂಭ ಮಾಡಿಕೊಂಡು ಅಧ್ಯಕ್ಷರಾಗಲಿ. ಆದ್ರೆ ಕೋವಿಡ್ 19 ಇರೋ ಹಿನ್ನಲೆ ಹೆಚ್ಚಿನ ಜನ ಸೇರಿಸಿ ಕರೋನಾ ನಿಯಮ ಉಲ್ಲಂಘನೆ ಮಾಡದಿರಿ ಎಂದು ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಸಿಎಂ ಅನುಮತಿ ನೀಡಿದ್ದಕ್ಕಾಗಿ ಡಿಕೆಶಿ ಟ್ವೀಟ್ ಮಾಡಿ ಸಿಎಂ ಬಿಎಸ್ ವೈಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಜೂನ್ 14ಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಕರೋನಾ ಲಾಕ್ಡೌನ್ ಹಿನ್ನಲೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಕೋರಿ ಪತ್ರವನ್ನೂ ಬರೆಯಲಾಗಿತ್ತು. ಆದ್ರೆ ಕೇಂದ್ರ ಸರ್ಕಾರದ ಕರೋನಾ ಲಾಕ್ಡೌನ್ ಗೈಡ್ಲೈನ್ ನಲ್ಲಿ ರಾಜಕೀಯ ಸಭೆ ಸಮಾರಂಭ ನಡೆಸೋದಿಕ್ಕೆ ಅವಕಾಶ ಇರದ ಕಾರಣ ನೀಡಿ ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು. ಆದ್ರೆ ಇಂದು ಸಿಎಂ ಮೌಖಿಕವಾಗಿ ಡಿಕೆಶಿ ಪದಗ್ರಹಣಕ್ಕೆ ಅನುಮತಿ ನೀಡಿದ್ದಾರೆ.