ಟೀಮ್ ಇಂಡಿಯಾ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸದ್ಯ ಡ್ಯಾನ್ಸರ್, ಕೋರಿಯೋಗ್ರಾರ್, ಡಾಕ್ಟರ್ ಮತ್ತು ಯುಟ್ಯೂಬರ್ ಧನಶ್ರೀ ವರ್ಮ ಎಸೆದ ಗೂಗ್ಲಿಗೆ ಬೋಲ್ಡ್ ಆಗಿರೋ ವಿಷ್ಯ ನಿಮ್ಗೆಲ್ಲಾ ತಿಳಿದೇ ಇದೆ. ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳೋ ಮುನ್ನ ಚಾಹಲ್ ಧನಶ್ರೀ ವರ್ಮಾ ಜೊತೆಗೆ ನಿಶ್ಚಿತಾರ್ತ ಮಾಡಿಕೊಂಡಿದ್ರು. ದಿಢೀರ್ ಎಂಗೇಜ್ಮೆಂಟ್ ರಹಸ್ಯದ ಬಗ್ಗೆ ನಾಲ್ಕುಜನ ಮಾತನಾಡಿಕೊಂಡಿದ್ರು. ಚಾಹಲ್ ಲವ್ ವಿಚಾರ ಗೊತ್ತೇ ಇರಲಿಲ್ಲ. ಇಷ್ಟು ಬೇಗ ಎಂಗೇಜ್ಮೆಂಟ್ ಆಯ್ತಾ ಅಂತೆಲ್ಲಾ ಮಾತನಾಡಿಕೊಂಡಿದ್ರು. ಆದ್ರೆ ಈ ಲವ್ಗೆ ಕಾರಣ ಲಾಕ್ಡೌನ್ ಅನ್ನೋದನ್ನ ಈಗ ಚಾಹಲ್ ಭಾವಿ ಪತ್ನಿ ಧನಶ್ರೀ ವರ್ಮಾ ಬಹಿರಂಗ ಪಡಿಸಿದ್ದಾರೆ. ಧನಶ್ರೀ ನೀಡಿರೋ ಮೀಡಿಯಾ ಇಂಟರ್ವ್ಯೂನಲ್ಲಿ ನನ್ನ ಕೋರಿಯೋಗ್ರಫಿ ಬಗ್ಗೆ ಚಾಹಲ್ ತಿಳಿದಿದ್ದರು, ಯೂಟ್ಯೂಬ್ ನಲ್ಲಿ ನನ್ನ ವೀಡಿಯೋ ನೋಡಿ ಲಾಕ್ಡೌನ್ ವೇಳೆ ಡ್ಯಾನ್ಸ್ ಕಲಿಯಲು ನನ್ನಬಳಿ ಬಂದಿದ್ದರು. ಬಳಿಕ ನಮ್ಮ ನಡುವೆ ಸ್ನೇಹವಾಗಿ ನಂತರ ಪ್ರೀತಿ ಹುಟ್ಟಿತು ಎಂದು ಸಂದರ್ಶನದಲ್ಲಿ ಧನಶ್ರೀ ವರ್ಮಾ ತಿಳಿಸಿದ್ದಾರೆ.

ಕರೊನಾ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸುಧಾರಿಸಿದರೆ ಮುಂದಿನ ವರ್ಷ ಮದುವೆಯಾಗ್ತಿವಿ. ಯಾಕಂದ್ರೆ ನಮ್ಮಿಬ್ಬರದೂ ದೊಡ್ಡ ಬಳಗವಿದೆ. ಬಂಧುಗಳು, ಸ್ನೇಹಿತರು, ಆಪ್ತರು ಎಲ್ಲರನ್ನೂ ಕರೆದು ಅದ್ದೂರಿಯಾಗಿ ಮದುವೆಯಾಗೋ ಯೋಚನೆ ಚಾಹಲ್‌ರದ್ದಾಗಿದೆ. ಹೀಗಾಗಿ ಎಂಗೇಜ್ಮೆಂಟ್ ಸರಳವಾಗಿ ಆಚರಿಸಿಕೊಂಡ್ವಿ ಎಂದು ಧನಶ್ರೀ ವರ್ಮಾ ಹೇಳಿದ್ದಾರೆ.