ಬೆಲ್ಜಿಯಂ: ಮಾದಕ ವ್ಯಸನಿಗಳು ಅದೇನ್ ಬೇಕಾದರೂ ಮಾಡಲು ಮುಂದಾಗುತ್ತಾರೆ ಅನ್ನೋದಕ್ಕೆ ಈ ಸುದ್ದಿಯೇ ಬೆಸ್ಟ್ ಎಕ್ಸಾಂಪಲ್.. ಇಲ್ಲೊಬ್ಬ ಭೂಪ ಡ್ರಗ್ಸ್ ಅನ್ನು ಸಾಗಿಸುವುದಕ್ಕೆ ನಕಲಿ ಶಿಶ್ನವನ್ನು ಅಂಟಿಸಿಕೊಂಡು ಸಿಕ್ಕಿ ಬಿದ್ದಿದ್ದಾನೆ.. ಬ್ರಿಟನ್ ಮೂಲದ ವ್ಯಕ್ತಿಯೊಬ್ಬ ಬೆಲ್ಜಿಯಂನಿಂದ ಜಮೈಕಾಗೆ ಪ್ರಯಾಣ ಬೆಳೆಸಿದ್ದ.. ಈ ವೇಳೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅನುಮಾನ ಬಂದು ಈತನನ್ನು ಮಾದಕ ದ್ರವ್ಯ ಪರೀಕ್ಷಗೆ ಒಳಪಡಿಸಿದ್ದಾರೆ..
ಬಳಿಕ ಈತನನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದಾಗ ಆತನ ನಕಲಿ ಶಿಶ್ನದಲ್ಲಿ 127 ಗ್ರಾಂ ಕೊಕೇನ್ ಪತ್ತೆಯಾಗಿದೆ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ. ಆದರೆ ಈತ ಯಾವುದೇ ಡ್ರಗ್ಸ್ ಜಾಲದಲ್ಲಿ ಒಳಗಾಗಿಲ್ಲ.. ಜಮೈಕಾಗೆ ತನ್ನ ತಾಯಿಯನ್ನು ನೋಡಲು ಹೋಗುವಾಗ ತನ್ನ ಸ್ವಂತ ಬಳಕೆಗಾಗಿ ಈ ಡ್ರಗ್ಸ್ ಅನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ತನಿಖೆಯಿಂದ ಬಹಿರಂಗವಾಗಿದೆ.
ಇನ್ನು 36 ತಿಂಗಳ ಜೈಲು ಶಿಕ್ಷೆ ನೀಡುವಂತೆ ಸರ್ಕಾರಿ ಪ್ರಾಸಿಕ್ಯೂಟರ್ ಮನವಿ ಮಾಡಿದ್ದಾರೆ. ಆದರೆ, ಆತನ ಆರೋಗ್ಯ ಸ್ಥಿತಿ ಸರಿ ಇಲ್ಲ, ಈತನ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಅಂತ ಆತನ ಪರ ವಕೀಲರು ಮನವಿ ಮಾಡಿದ್ದಾರೆ.