ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಖಿನ್ನತೆಗೆ ಒಳಗಾಗಿ, ಇತ್ತೀಚಿಗಷ್ಟೇ ಫೇಸ್ ಬುಕ್ ನಲ್ಲಿ ಈ ಜಗತ್ತಿಗೆ ಗುಡ್ ಬೈ ಅಂತ ಹೇಳಿ ಅಚ್ಚರಿ ಮೂಡಿಸಿದ್ದರು. ಅದಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲದೇ ಜಯಶ್ರೀಯ ನೆರವಿಗೆ ಸುದೀಪ್ ಅವರು ಆಗಮಿಸಿದ್ರು.
ಸುದೀಪ್ ಟ್ರಸ್ಟ್ ಮೂಲಕ ಜಯಶ್ರಿಗೆ ನೆರವು?
ಜಯಶ್ರೀಯವರ ಕಷ್ಟಕ್ಕೆ ಕಿಚ್ಚ ಸುದೀಪ್ ಅವರ ಟ್ರಸ್ಟ್ ನವರು ನೆರವಾದ್ರು. ಜಯಶ್ರೀ ಅವರ ಮನವೊಲಿಸಿದ್ರು. ಜೊತೆಗೆ ಟ್ರಸ್ಟ್ ನಲ್ಲಿ ಕೆಲ ಜವಾಬ್ದಾರಿಗಳನ್ನು ನೀಡಿ, ಕೆಲಸ ಮಾಡಲು ಅನುಕೂಲ ಮಾಡಿ ಕೊಟ್ಟಿದ್ದಾರೆ ಎನ್ನಲಾಗಿದೆ.

ಹೊಸ ಜೀವನ ಆರಂಭಿಸಿದ ಜಯಶ್ರಿ
ತಲೆ ಬೋಳಿಸಿಕೊಂಡು ಫೋಟೋ ಪೋಸ್ಟ್ ಮಾಡಿದ್ದು, ಅಚ್ಚರಿ ಮೂಡಸಿದೆ. ಅಲ್ಲದೇ, ಈ ಮೂಲಕ ಹೊಸ ಹೆಜ್ಜೆ ಅಂತ ಬರೆದುಕೊಂಡಿದ್ದಾರೆ. ಇದು ಅಚ್ಚರಿಗೂ ಕಾರಣವಾಗಿದೆ, ಏನೇ ಆದ್ರೂ ಆಕೆ ಖಿನ್ನತೆಯಿಂದ ಹೊರಬಂದರೆ ಅಷ್ಟೇ ಸಾಕು ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ.