ಬೆಂಗಳೂರು: ಲವ್ ಮಾಕ್ಟೈಲ್ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸುದ್ದಿ ಮಾಡಿದ್ದ ಸಿನಿಮಾ.. ಎರಡು ಹೃದಯಗಳ ನಡುವಿನ ಭಾವನೆಯನ್ನ ಅತ್ಯಂತ ಸುಂದರವಾಗಿ ತೆರೆಯಮೇಲೆ ಮೂಡಸಿದ್ದ ಚಿತ್ರದ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ.. ಹೌದು.. ಲವ್ ಮಾಕ್ಟೈಲ್ ಸಕ್ಸಸ್ ಆದ ಬೆನ್ನಲ್ಲೇ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೈಲ್ ಚಿತ್ರದ ಮುಂದುವರಿದ ಭಾಗವನ್ನು ತೆರೆಯ ಮೇಲೆ ಮೂಡಿಸಲು ರೆಡಿಯಾಗಿದ್ದಾರೆ.. ಇವತ್ತು ಬೆಂಗಳೂರಿನ ಆಂಜನೇಯ ದೇವಸ್ಥಾನದಲ್ಲಿ ಲವ್ ಮಾಕ್ಟೈಲ್ 2 ಚಿತ್ರಕಥೆಗೆ ಇಂದು ಪೂಜೆ ನೆರವೇರಿಸಲಾಯ್ತು.


ಲಾಕ್‍ಡೌನ್ ಸಮಯದಲ್ಲಿ ಶೂಟಿಂಗ್ ಇಲ್ಲದೇ ಫ್ರೀಯಾಗಿದ್ದ ನಿರ್ದೇಶಕ ಡಾರ್ಲಿಂಗ್ ಕೃಷ್ಣ, ಲವ್ ಮಾಕ್ಟೈಲ್ ಕಥೆಯನ್ನು ಮುಂದುವರಿಸುವ ಯೋಚನೆ ಮಾಡಿ ಲವ್ ಮಾಕ್ಟೈಲ್ 2 ಚಿತ್ರಕಥೆ ಬರೆದಿದ್ದಾರೆ.. ಇವತ್ತು ಆಚಿಜನೇಯನ ಸನ್ನಿಧಾನದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ.. ಡಾರ್ಲಿಂಗ್ ಕೃಷ್ಣ ಹಾಗೂ ಲವ್ ಮಾಕ್ಟೈಲ್ ಚಿತ್ರದಲ್ಲಿ ನಾಯಕಿಯಾಗಿದ್ದ ಮಿಲನ ನಾಗರಾಜ್ ಈ ಪೂಜೆಯಲ್ಲಿ ಭಾಗಿಯಾಗಿದ್ದರು.. ಸ್ಯಾಂಡಲ್‍ವುಡ್‍ನಲ್ಲಿ ಸಂಚಲನ ಮೂಡಿಸಿದ್ದ ಲವ್ ಮಾಕ್ಟೈಲ್ ಚಿತ್ರದ ಮುಂದುವರಿದ ಭಾಗ ಸೂಪರ್ ಆಗಿರುತ್ತೆ.. ಲವ್ ಮಾಕ್ಟೈಲ್‍ನಂತೆ ಪಾರ್ಟ್ 2 ಮತ್ತಷ್ಟು ವಿಭಿನ್ನವಾಗಿರಲಿದೆ ಅಂತ ಚಿತ್ರದ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ..