ಮಂಗಳೂರು-ಮಂಗಳೂರಿನ ತೊಕ್ಕೋಟ್ಟು ಒಳಪೇಟೆಯಲ್ಲಿ ಜೂನ್ 20ರಂದು ಮಾಂಸದಂಗಡಿ ಮಾಲೀಕನ ಮೇಲೆ ದುಷ್ಕರ್ಮಿಗಳು ತಲವಾರಿನಲ್ಲಿ ದಾಳಿ ನಡೆಸಿದ್ದರು. ಈ ಕೇಸ್ ಗೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಇಬ್ಬರು ಆರೋಪಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ.
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿದ್ದ ಇಬ್ಬರು ಆರೋಪಿಗಳಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಪಾಸಿಟಿವ್ ಬಂದಿರುವುದು ವರದಿಯಾಗಿದೆ.
ಜೂನ್ 20ರಂದು ಮಾಂಸದಂಗಡಿ ವ್ಯಾಪಾರಿ ನಜೀರ್ ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ತಲವಾರು ದಾಳಿ ನಡೆಸಿದ್ದರು, ಇದಕ್ಕೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿತ್ತು.