ಮಂಗಳೂರು-ದಕ್ಷಿಣ ಕನ್ನಡದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ ನಿನ್ನೆಯೂ ಕೂಡ 97 ಪ್ರಕರಣ ದಾಖಲಾಗಿತ್ತು, ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜ್ಯುವೆಲ್ಲರಿ ಶಾಪ್ ಗಳನ್ನು ಐದು ದಿನಗಳ ಕಾಲ ಬಂದ್ ಮಾಡಲು ನಿರ್ಧರಿಸಲಾಗಿದೆ.
ಜುಲೈ 5ರಿಂದ ಜುಲೈ 9ರವರೆಗೆ ಚಿನ್ನದ ಅಂಗಡಿಗಳು ಬಂದ್
ಜುಲೈ 5ರಿಂದ ಜುಲೈ 9ರವರೆಗೆ ಜ್ಯುವೆಲ್ಲರಿ ಶಾಪ್ ಗಳನ್ನು ತೆರೆಯದಿರಲು ದಕ್ಷಿಣ ಕನ್ನಡ ಜಿಲ್ಲಾ ಸ್ವರ್ಣ ವ್ಯಾಪಾರ ಸಂಘದ ನಿರ್ಧರಿಸಿದೆ. ಈ ಮೂಲಕ ಚಿನ್ನ ಕೊಂಡುಕೊಳ್ಳಲು ಪ್ಲಾನ್ ಮಾಡಿದವರೂ ಐದು ದಿನ ಕಾಯಲೇ ಬೇಕು. ಈಗಾಗ್ಲೇ ಬುಕ್ಕಿಂಗ್ ಮಾಡಿರುವ ಚಿನ್ನದ ಅಂಗಡಿಯವರು, ಜುಲೈ ನಾಲ್ಕು ಶನಿವಾರ ಅಂದ್ರೆ, ಇವತ್ತು ಸಂಜೆಯೊಳಗೆ ಪಡೆದುಕೊಳ್ಳಬಹುದೆಂದು ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮಂಗಳೂರಿನಲ್ಲಿ ಸ್ವರ್ಣ ವ್ಯಾಪಾರಿಗಳು ತೆಗೆದುಕೊಂಡಿರುವ ಬಂದ್ ತೀರ್ಮಾನದಿಂದ, ಬೇರೇ ಬೇರೆ ವ್ಯಾಪಾರಿಗಳು ಕೂಡ ಇಂತಹ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.