ಮಂಗಳೂರು:ದಕ್ಷಿಣ ಕನ್ನಡದಲ್ಲಿಂದು ಕೊರೊನಾದ ಆರ್ಭಟ ಹೆಚ್ಚಿರುವ ಸೂಚನೆಗಳು ಸಿಗುತ್ತಿವೆ. ದಕ್ಷಿಣ ಕನ್ನಡದಲ್ಲಿಂದು 100ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ವರದಿಯಾಗುವ ಸಾಧ್ಯತೆಯಿದೆ.
ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳಿಗೆ ಅಧಿಕ ಸೋಂಕು
ಸತತವಾಗಿ 90ರ ಗಡಿ ದಾಟುತ್ತಿದ್ದ ದಕ್ಷಿಣ ಕನ್ನಡದಲ್ಲಿಂದು ಕೊರೊನಾ ಶತಕ ಬಾರಿಸುವ ಸಾಧ್ಯತೆಯಿದೆ. ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹೊಂದಿದವರಲ್ಲೇ ಅಧಿಕ ಜನರಿಗೆ ಸೋಂಕು ತಗುಲಿದೆ ಅಂತ ಹೇಳಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಯಾಣ, ILI, SARI ಪ್ರಕರಣದಿಂದಲೂ ಪಾಸಿಟಿವ್ ಕೇಸ್ ವರದಿಯಾಗುವ ಸಾಧ್ಯತೆಯಿದೆ. ಅಂದಾಜು 140ಕ್ಕೂ ಹೆಚ್ಚು ಪ್ರಕರಣಗಳು ಇಂದು ದಾಖಲಾಗಿದೆ ಎನ್ನಲಾಗಿದೆ.
ಉಳ್ಳಾಲದಲ್ಲಿ ನಡೆದ ಏಕಾಏಕಿ ಟೆಸ್ಟ್ ನಲ್ಲಿ ಕೊರೊನಾದ ಅಬ್ಬರ
ಇಂದು 30ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ?
ದಕ್ಷಿಣ ಕನ್ನಡದಲ್ಲಿ ಕೊರೊನಾ ಸಮುದಾಯ ಮಟ್ಟಕ್ಕೆ ಹರಡಿದ್ಯಾ ಅನ್ನುವ ಆತಂಕ ಮನೆ ಮಾಡಿದೆ. ಅದರಲ್ಲೂ ಉಳ್ಳಾಲದಲ್ಲಿ ಏಕಾಏಕಿ ನಡೆಸಿದ ಪರೀಕ್ಷೆಯಲ್ಲಿ ಹೆಚ್ಚಿನ ಜನರಿಗೆ ಕೊರೊನಾ ಬಂದಿದೆ. ಇಂದು ಕೂಡ 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ ಎನ್ನಲಾಗಿದೆ.
ಮಾಜಿ ಕೇಂದ್ರ ಸಚಿವರಿಗೂ ತಟ್ಟಿದ ಕೊರೊನಾ
ಮನೆ ಕೆಲಸದಾಕೆಯಿಂದ ಹರಡಿತಾ ಮಹಾಮಾರಿ
ಬಂಟ್ವಾಳದಲ್ಲಿ ವಾಸವಾಗಿರುವ ಮಾಜಿ ಕೇಂದ್ರ ಸಚಿವರು, ಕಾಂಗ್ರೆಸ್ ನ ಮುಖಂಡನಿಗೂ ಕೂಡ ಕೊರೊನಾ ಹಬ್ಬಿದೆ. ಇವರಿಗೆ ಮನೆ ಕೆಲಸದಾಕೆಯಿಂದ ಸೋಂಕು ಹರಡಿದೆ ಎನ್ನಲಾಗಿದೆ. ಸಚಿವರ ಜೊತೆ ಪತ್ನಿಗೂ ಕೂಡ ಕೊರೊನಾ ಹರಡಿದೆ ಎನ್ನಲಾಗಿದೆ.
ಹೀಗೆ ರಾಜಧಾನಿ ಬೆಂಗಳೂರು ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದು ಕರಾವಳಿಯಲ್ಲಿ ಆತಂಕ ಹೆಚ್ಟಿಸಿದೆ.