ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕೊರೊನಾದ ಆರ್ಭಟ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಕೂಡ ಏರಿಕೆ ಕಂಡು ಬರುತ್ತಿದೆ. ಮಂಗಳೂರು ಹೊರವಲಯದ ಸಂತೋಷ್ ನಗರದ ನಿವಾಸಿ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 52 ವರ್ಷದ ವ್ಯಕ್ತಿ ನ್ಯೂಮೋನಿಯಾ ಮತ್ತು ಹೃದಯರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಉಳ್ಳಾಲ ಮೂಲದ 52 ವರ್ಷದ ಮಹಿಳೆಯೂ ಕೂಡ ವೆನ್ಲಾಕ್ ನಲ್ಲಿ ಸಾವನ್ನಪ್ಪಿದ್ದಾರೆ. ಇವರು ಕೂಡ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಆದ್ದರಿಂದ ಸೋಮವಾರ ಬೆಳಗ್ಗೆಯೇ ಇಬ್ಬರು ಕೊರೊನಾಗೆ ಬಲಿಯಾದಂತಾಗಿದೆ.
ಈ ಮೂಲಕ ಮಂಗಳೂರಿನಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 24ಕ್ಕೇ ಏರಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಒಂದು ಕಡೆ ವರುಣನ ಆರ್ಭಟ, ಮತ್ತೊಂದು ಕಡೆ ಕೊರೊನಾ ಮಹಾಮಾರಿಟ ಕಾಟ, ಜಿಲ್ಲೆಯಾದ್ಯಂತ ಡೆಂಗ್ಯು ಜ್ವರವೂ ಕೂಡ ತಾಂಡವವಾಡುತ್ತಿದೆ. ಇದೆಲ್ಲದರ ಮಧ್ಯೆ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕ್ಕೀಡುಮಾಡಿದೆ.