ದೆಹಲಿ: ದೇಶಾದ್ಯಂತ ಮತ್ತೆ ಆತಂಕ ಹೆಚ್ಚಾಗುವ ಭೀತಿಯಿದೆ. ಕೊರೊನಾ ರೂಪಾಂತರದಂತಿರುವ ಬ್ರಿಟನ್ ವೈರಸ್ ಭಾರತೀಯರಲ್ಲೂ ಪತ್ತೆಯಾಗಿದೆ.ದೇಶಾದ್ಯಂತ ಆರು ಜನರಲ್ಲಿ ಈಗಾಗ್ಲೇ ರೂಪಾಂತರಿ ಕೊರೊನಾ ಪತ್ತೆಯಾಗಿದೆ.
ಬೆಂಗಳೂರಿನ ಮೂವರಲ್ಲಿ ರೂಪಾಂತರಿ ಸೋಂಕು ಪತ್ತೆಯಾಗಿದೆ. ಬ್ರಿಟನ್ ನಿಂದ ಆಗಮಿಸಿದ ರಾಜ್ಯದ ಹದಿನೈದು ಮಂದಿ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಮೂವರಲ್ಲಿ ರೂಪಾಂತರಿ ಕೊರೊನಾ ಪತ್ತೆಯಾಗಿದ್ದು ಆತಂಕ ಹೆಚ್ಚಿಸಿದೆ.
ಹೊಸ ವರ್ಷಾಚಾರಣೆಗೆ ಬೀಳುತ್ತಾ ಬ್ರೇಕ್!?
ಈಗಾಗ್ಲೆ ನೈಟ್ ಕರ್ಫ್ಯೂ ಜಾರಿಗೆ ಮುಂದಾಗಿ, ಸಾರ್ವಜನಿಕ ವಲಯದ ವಿರೋಧದಿಂದ ಸರ್ಕಾರ ಹಿಂದೇಟು ಹಾಕಿತ್ತು.ಹೊಸ ವರ್ಷಾಚರಣೆಗೆ ನಿಯಮ ಬದ್ದವಾಗಿ ಅವಕಾಶವನ್ನೂ ಮಾಡಿಕೊಟ್ಟಿತ್ತು. ಆದರೆ ಈಗ ಆ ನಿರ್ಧಾರವನ್ನು ಪರಿಶೀಲಿಸುವ ಸಾಧ್ಯತೆಯಿದ್ದು, ಹೊಸ ವರ್ಷಾಚರಣೆಗೆ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ