ದೆಹಲಿ: ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಿವಿಧ ನಿಯಮಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ದಂಡ ವಿಧಿಸಿ ತಬ್ಲಿಘಿ ಜಮಾತ್ ಸದಸ್ಯರನ್ನು ಗಡೀಪಾರು ಮಾಡಲು ಆದೇಶಿಸಿತ್ತು.
ಆದರೆ, ಸುಮಾರು 70 ವಿದೇಶಿ ತಬ್ಲಿಘಿ ಜಮಾತ್ ಸದಸ್ಯರು ಅವರ ವಿರುದ್ಧದ ಇತರ ಏಳು ಎಫ್‌ಐಆರ್‌ಗಳು ಬಾಕಿ ಉಳಿದಿರುವ ಕಾರಣ ತಮ್ಮ ದೇಶಗಳಿಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಅವರ ಪ್ರತಿನಿಧಿಗಳು ಹೇಳಿದ್ದಾರೆ.
ಮಾರ್ಚ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತಬ್ಲೀಘಿ ಸದಸ್ಯರ ವಿರುದ್ಧ ಈ ಏಳು ಎಫ್‌ಐಆರ್‌ಗಳಲ್ಲಿ ವಿಚಾರಣೆ ನಡೆಸಲು ಪೊಲೀಸರು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ನ್ಯಾಯಾಲಯವು ಇಂದು ಈ ವಿಷಯವನ್ನ ಆಲಿಸಲಿದೆ ಎಂದು ತಬ್ಲಿಘಿ ಜಮಾತ್ ಹೇಳಿದೆ.
ಈ ಪ್ರಕರಣದಲ್ಲಿ ದೆಹಲಿ ಪೊಲೀಸರ ಚಾರ್ಜ್‌ಶೀಟ್ ಪಡೆದ ಜಿಬೌಟಿ, ಕೀನ್ಯಾ, ತಾನ್ಜೇನಿಯಾ, ಬ್ರೆಜಿಲ್, ಸುಡಾನ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ವಿವಿಧ ದೇಶಗಳ ವಿದೇಶಿಯರ ಮೇಲೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.