ಬೆಂಗಳೂರು- ಸ್ಯಾಂಡಲ್ ವುಡ್ ನಟಿ ಗಂಡ ಹೆಂಡತಿ ಖ್ಯಾತಿ ಸಂಜನಾಗೂ ಡ್ರಗ್ಸ್ ಉರುಳು ಸುತ್ತಿಕೊಳ್ಳುತ್ತಾ ಅನ್ನೋ ಅನುಮಾನ ಈಗ ಜೋರಾಗಿದೆ. ಇಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದಿರಾನಗರದಲ್ಲಿರುವ ಸಂಜನಾ ಮನೆಯಲ್ಲಿ ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ. ಸಿಸಿಬಿ ಇನ್ಸ್ ಪೆಕ್ಟರ್ ಅಂಜುಮಾಲಾ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.
ರಾಕಿ ಬ್ರದರ್ ತಂದೊಡ್ಡಿದ ಸಂಕಷ್ಟ!
ಡ್ರಗ್ಸ್ ಪೆಡ್ಲರ್ ರಾಹುಲ್ ಶೆಟ್ಟಿಯಸಂಪರ್ಕವೇ ದಾಳಿಗೆ ಕಾರಣ?
ಈಗಾಗ್ಲೇ ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಡ್ರಗ್ ಪೆಡ್ಲರ್ ರಾಹುಲ್ ಶೆಟ್ಟಿ ಸಂಜನಾರ ಆಪ್ತನಾಗಿದ್ರು. ಅಲ್ಲದೇ ಸಂಜನಾ ಕೂಡ ರಾಹುಲ್ ಶೆಟ್ಟಿ ನನಗೆ ಗೊತ್ತು, ಆತ ನನ್ನ ರಾಕಿ ಬ್ರದರ್ ಅಂತನೂ ಹೇಳಿಕೊಂಡಿದ್ದರು. ಈ ಸಂಪರ್ಕವೇ ಸಂಜನಾ ಮನೆ ಮೇಲಿನ ದಾಳಿಗೆ ಕಾರಣ ಎನ್ನಲಾಗಿದೆ. ಸಂಜನಾರ ಮನೆ,ಕಾರು ಇತ್ಯಾದಿಗಳನ್ನು ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ.
ವಿರೇನ್ ಖನ್ನಾಗೂ ಶಾಕ್
ಸಂಜನಾ ಗರ್ಲಾನಿ ಆಪ್ತ ಮತ್ತು ಡ್ರಗ್ ಪೆಡ್ಲರ್ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ವೀರೇನ್ ಖನ್ನಾ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರಿನ ಶಾಂತಿನಗರದಲ್ಲಿರುವ ಮನೆ ಮತ್ತು ದೆಹಲಿಯಲ್ಲಿರುವ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಲಾಗಿದೆ.
ಎರಡು ಹೆಸರಲ್ಲಿ ನಡೆಸಿದ್ದಾರಾ ವ್ಯವಹಾರ?
ಸಂಜನಾ ಅರ್ಚನಾ ಇಬ್ಬರು ಒಬ್ಬರೇನಾ?
ಸಂಜನಾ ಗರ್ಲಾನಿಗೆ ಮತ್ತೊಂದು ಹೆಸರಿದೆಯಾ ಅನ್ನೋ ಅನುಮಾನ ಈಗ ವ್ಯಕ್ತವಾಗಿದೆ. ಸಂಜನಾ ಗರ್ಲಾನಿ ನಟಿಯಾಗಿ ಫೇಮಸ್ ಆಗಿದ್ದರೂ ಕೂಡ ಅವರಿಗೆ ಅರ್ಚನಾ ಅನ್ನೋ ಹೆಸರಿದ್ಯಾ ಅನ್ನುವ ಅನುಮಾನಗಳಿವೆ. ಈ ಕುರಿತು ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.