ಶಿರಾ-ಶಿರಾದ ಹಾಲಿ ಶಾಸಕ ವಿಧಿವಶರಾದ ಹಿನ್ನಲೆ ಉಪ ಚುನಾವಣೆ ಘೋಷಣೆಯಾಗಿದೆ. ನವೆಂಬರ್ 3ರಂದು ನಡೆಯಲಿರುವ ಮತದಾನಕ್ಕೆ ಜೆ ಡಿ ಎಸ್ ಈಗಾಗ್ಲೇ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದೆ. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ವಿಭಿನ್ನ ಮಾತುಗಳಿಂದ ಗಮನ ಸೆಳೆದಿದ್ದಾರೆ.
ವಿಷ ಕೊಡ್ತಿರೋ ಹಾಲು ಕೊಡ್ತಿರೋ?
ಶಿರಾದಲ್ಲಿ ನಾವು ಗೆಲ್ಲಲೇಬೇಕು. ನಾನು ಬಹಳ ಮಹಾತ್ವಾಕಾಂಕ್ಷೆಯಲ್ಲಿರುವ ಚುನಾವಣೆಯಿದು. ಉಳಿದ ಎರಡೂ ಪಕ್ಷಗಳಿಗಿಂತ ಇಲ್ಲಿ ನಾವೇ ಬಲಿಷ್ಠವಾಗಿದ್ದೇವೆ. ಇಲ್ಲಿ ನನಗೆ ನೀವು ವಿಷ ಕೊಡುತ್ತೀರೋ ಅಥವಾ ಹಾಲು ಕೊಡುತ್ತೀರೋ ನೀವೇ ನಿರ್ಧರಿಸಿ ಅಂತ ಮತದಾರರಿಗೆ ಹೆಚ್ ಡಿ ಕೆ ಪ್ರಶ್ನಿಸಿದ್ದಾರೆ. ಈ ಮೂಲಕ ತನ್ನ ಚುನಾವಣಾ ಭಾಷಣ ಶೈಲಿಯ ಮೊದಲ ಹೆಜ್ಜೆಯಿಟ್ಟಿದ್ದಾರೆ.
ಅಂದು ವಿಷಕಂಠ, ಇಂದು ವಿಷ ಕೊಡಿ ಅಂದ ಹೆಚ್ ಡಿ ಕೆ!
ಸಮ್ಮಿಶ್ರ ಸರ್ಕಾರ ನಡೆಸುವುದು ಕಷ್ಟಕರ ವಿಚಾರ. ನಾನು ವಿಷ ಕುಡಿದರೂ ಸಾವಧಾನದಿಂದಿರುವ ವಿಷಕಂಠ ಅಂತ ಮಾತನಾಡಿ ಮಂಡ್ಯದಲ್ಲಿ ಗಮನ ಸೆಳೆದಿದ್ದರು. ಅಂದಿನ ವಿಷಕಂಠ ಡೈಲಾಗ್ ಭಾರೀ ಪ್ರಚಾರ ಪಡೆದಿತ್ತು. ಇಂದು ಮತ್ತೆ ವಿಷದ ವಿಚಾರ ಬಂದಿದೆ. ಅಂದಿನ ವಿಷಕಂಠನೇ ಶಿರಾದಲ್ಲಿ ವಿಷ ಕೊಡಿ ಅಥವಾ ಹಾಲು ಕೊಡಿ ಅಂತ ಕೇಳಿ ಅಚ್ಚರಿ ಮೂಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಟೀಕೆ
ಬಿಜೆಪಿಯಿಂದ ಸಿಎಂ ಆಫರ್
ಶಿರಾದಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಜೊತೆ ನಡೆಸಿದ ಸಮ್ಮಿಶ್ರ ಸರ್ಕಾರದ ತೀರ್ಮಾನವೇ ದೊಡ್ಡ ತಪ್ಪು ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ. ಮತ್ತೊಂದೆಡೆ ನಾನು ಮುಖ್ಯಮಂತ್ರಿ ಹುದ್ದೆಯ ಮೇಲೆ ಆಸೆ ಪಡುವುದಾದರೇ ನನಗೆ ಬಿಜೆಪಿಯ ವರಿಷ್ಠರೇ ಆಫರ್ ಕೊಟ್ಟಿದ್ದರು. ಐದು ವರ್ಷ ಯಾವುದೇ ಕಾರಣಕ್ಕೂ ಕುರ್ಚಿ ಅಲುಗಾಡಲ್ಲ ಅಂತನೂ ಹೇಳಿದ್ದರು. ಆದರೆ ನಾನು ಒಪ್ಪಿಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಪ್ರಮುಖ ಮುಖಂಡರ ಜೊತೆಗಿನ ಮಾತುಕತೆಯಲ್ಲಿ ಯಾರಿಗೆ ಟಿಕೆಟ್ ನೀಡುವುದು ಎಂಬ ಕುರಿತಾಗಿ ಚರ್ಚಿಸಲಾಯ್ತು. ಶೀಘ್ರವೇ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ಹೇಳಿ, ಕುತೂಹಲವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಈಗಾಗ್ಲೇ ವಿಷದ ಮ್ಯಾಟರ್ ಬಂದಿರುವುದರಿಂದ, ಮುಂದೆ ಸಮ್ಮಿಶ್ರ ಸರ್ಕಾರದ ಮತ್ತಷ್ಟು ಕರಾಳ ಸತ್ಯಗಳು ಹೊರಬರುವ ಸಾಧ್ಯತೆ ದಟ್ಟವಾಗಿದೆ.