ಬೆಂಗಳೂರು: ಕೊರೊನಾದ ನಡುವೆಯೂ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ನಡೆಸಿದೆ. ಈಗ ಪರೀಕ್ಷಾ ಫಲಿತಾಂಶ ಯಾವಾಗ ಅನ್ನುವ ಪ್ರಶ್ನೆಗಳು ಎದ್ದಿವೆ. ಪಿಯುಸಿಯ ಮೌಲ್ಯಮಾಪನ ಈಗಾಗ್ಲೇ ಮುಗಿದಿದ್ದು, ಇಂದಿನಿಂದ ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಮೌಲ್ಯಮಾಪನ ನಡೆಯುತ್ತಿದೆ.
ನಾಳೆ ಬೆಳಗ್ಗೆ 11.30ಕ್ಕೆ ಪಿಯುಸಿ ಫಲಿತಾಂಶ
ನಾಳೆ ಬೆಳಗ್ಗೆ 11.30ಕ್ಕೆ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ವಿದ್ಯಾರ್ಥಿಗಳು ನೋಂದಣಿ ಮಾಡಿರುವ ಮೊಬೈಲ್ ನಲ್ಲೂ ಕೂಡ ಫಲಿತಾಂಶ ನೋಡಬಹುದು. ಅಲ್ಲದೇ, ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲೂ ಕೂಡ ಫಲಿತಾಂಶವನ್ನು ಪ್ರಕಟಿಸಲಾಗುತ್ತೆ.
ಪ್ರಥಮ ಪಿಯುಸಿ ಪರೀಕ್ಷೆ ಬರೆಯದವರೂ ಪಾಸ್
ಕೊರೊನಾ ಹಿನ್ನಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ಬರೆಯದವರೂ ಕೂಡ ಪಾಸ್. ಇವರಿಗೆ ಮತ್ತೊಂದು ಪರೀಕ್ಷೆ ಮಾಡುವುದಿಲ್ಲ ಮತ್ತು ಅವರಿಗೆ ನೇರವಾಗಿ ದ್ವಿತೀಯ ಪಿಯುಸಿಗೆ ಬಡ್ತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.