ಬೆಂಗಳೂರು: ಎರಡನೇ ಕೋವಿಡ್ ಅಲೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡ ನೈಟ್ ಕರ್ಫ್ಯೂ ನಾಳೆಯಿಂದ ನಡೆಯಲಿದೆ ಎಂದು ಸರ್ಕಾರ ಘೋಷಣೆ ಮಾಡಿದೆ.
ರಾತ್ರಿ 11ರಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ!
ರಾತ್ರಿ ಹತ್ತುಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಕರ್ಫ್ಯೂ ಮಾಡು ನಿರ್ಧಾರವನ್ನು ಸರ್ಕಾರ ಸಡಿಲಿಸಿದೆ. ರಾತ್ರಿ ಹನ್ನೊಂದರಿಂದ ಮುಂಜಾನೆ ಆರರವರೆಗೆ ಅಂತ ನಿರ್ಧರಿಸಲಾಗಿದೆ.
ಆಟೋ,ಟ್ಯಾಕ್ಸಿ,ಬಸ್ ಓಡಾಟಕ್ಕೆ ಅನುಮತಿ!
ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಹಲವು ನಿಯಮಗಳನ್ನು ಹೇರಿದೆ. ಅವುಗಳ ಪ್ರಕಾರ ನಿಯಮಗಳು ಹೀಗಿವೆ
- ಸರಕು ಸಾಗಣಿಕೆ ವಾಹನಗಳು ಓಡಾಟ ಮಾಡಬಹುದು
*ರಾತ್ರಿ ಪಾಳಿಯಲ್ಲಿ ಶೇಕಡಾ 50 ಸಿಬ್ಬಂದಿ ಇಟ್ಕೊಂಡು ಕೆಲಸ ಮಾಡಬೇಕು - ಕಾರ್ಖಾನೆ ಮತ್ತು ಕಂಪನಿಗಳು ದಿನದ 24 ಗಂಟೆ ಕೆಲಸಕ್ಕೆ ಸಮ್ಮತಿ
*ರೈಲು,ವಿಮಾನ ಮತ್ತು ನೈಟ್ ಬಸ್ ಓಡಾಟಕ್ಕೆ ಅವಕಾಶ
*ರಾತ್ರಿ ಪಾಳಿಯ ಕೆಲಸಗಾರರ ಓಡಾಟಕ್ಕೆ ಸೂಕ್ತ ದಾಖಲಾತಿ ಅವಶ್ಯ
*ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಂಪೆನಿಗಳು ಶೇಕಡಾ 50ರಷ್ಟು ನೌಕರರನ್ನು ಬಳಸಬೇಕು
*ರಾತ್ರಿ ಕ್ಯಾಬ್, ಆಟೋ ಓಡಾಟಕ್ಕೆ ಅವಕಾಶ
*ಕೋವಿಡ್ ನಿಯಮ ಪಾಲನೆಯೊಂದಿಗೆ ಕ್ರಿಸ್ಮಸ್ ಪ್ರಾರ್ಥನೆಗೆ ಅವಕಾಶ
ಹೀಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.