ದೆಹಲಿ: ದ್ವಿಚಕ್ರ ವಾಹನ ಖರೀದಿ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿಯೊಂದನ್ನು ನೀಡುವ ಸಾಧ್ಯತೆ ಇದೆ.. ಹೌದು, ದ್ವಿಚಕ್ರ ವಾಹನದ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.. ಕೆಲವೊಂದು ಉದ್ಯಮಿಗಳ ಸಲಹೆಯ ಬಳಿಕ ಕೇಂದ್ರ ಹಣಕಾಸು ಸಚಿವೆ, ನಿರ್ಮಲಾ ಸೀತಾರಾಮನ್ ದ್ವಿಚಕ್ರ ವಾಹನಗಳ ಜಿಎಸ್‌ಟಿ ದರದಲ್ಲಿ ಬದಲಾವಣೆಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 19 ರಂದು ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಆಶಿಸಲಾಗಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ ದೀಪಾವಳಿ ಹಬ್ಬದ ವೇಳೆಗೆ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ.
ಸದ್ಯ ಕೊರೊನಾ ವೈರಸ್ ನಿಂದಾಗಿ ದ್ವಿಚಕ್ರ ವಾಹನಗಳ ಮಾರಾಟ ಸ್ಥಗಿತಗೊಂಡಿದೆ. ಕಳೆದ ವರ್ಷ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪೆನಿ ಹೀರೋ ಮೊಟೊಕಾರ್ಪ್ ಜಿಎಸ್‌ಟಿಯನ್ನು ಹಂತ ಹಂತವಾಗಿ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿತು. ಹೀರೋ ಮೊಟೊಕಾರ್ಪ್ ತನ್ನ ಆರಂಭಿಕ 150 ಸಿಸಿ ದ್ವಿಚಕ್ರ ವಾಹನಗಳನ್ನು ಮೊದಲ 18% ಜಿಎಸ್‌ಟಿಯ ಸ್ಲಾಬ್ ತರಬೇಕೆಂದು ಸೂಚಿಸಿತ್ತು. ಇದೀಗ ಮೋಟರ್ ಸೈಕಲ್‌ಗಳು, ಮೊಪೆಡ್‌ಗಳು ಮತ್ತು ಸಣ್ಣ ಮೋಟಾರು ಸೈಕಲ್‌ಗಳಂತಹ ದ್ವಿಚಕ್ರ ವಾಹನಗಳು ಅತ್ಯಧಿಕ ಜಿಎಸ್‌ಟಿ ಬ್ರಾಕೆಟ್ 28ರ ಅಡಿಯಲ್ಲಿ ಬರುತ್ತವೆ.