ಬೆಂಗಳೂರು-ಸಾರಿಗೆ ನೌಕರರ ಮುಷ್ಕರ ವಾಪಾಸ್ ಅಂದ ಬೆನ್ನಲ್ಲೇ ಮುಂದುವರೆದ ಬೃಹನ್ನಾಟಕದ ನಡುವೆ ನೌಕರರ ನಡುವೆಯೇ ಬಿಕ್ಕಟ್ಟು ಏರ್ಪಟ್ಟಿರುವುದು ಸಾಬೀತಾಗುತ್ತಿದೆ.ಕೋಡಿಹಳ್ಳಿ ಚಂದ್ರಶೇಖರ್ ತಂಡದವರು ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ ಬೆನ್ನಲ್ಲೇ ಭಿನ್ನರಾಗ ಶುರುವಾಗಿದೆ.
ಸ್ಟಾಪ್ ವರ್ಕರ್ಸ್ ಫೆಡರೇಷನ್ ನಿಂದ ಕರ್ತವ್ಯಕ್ಕೆ ಹಾಜರಾಗಲು ಕರೆ
ಸಚಿವರೊಂದಿಗೆ ಮಾತುಕತೆ ನಡೆಸಿದ ನೌಕರರ ಪರವಾದ ನಾಯಕರು ಮುಷ್ಕರ ಕೈ ಬಿಡಲು ಒಪ್ಪಿಕೊಂಡು, ನಂತರ ಉಲ್ಟಾ ಹೊಡೆದಿರುವ ಬಗ್ಗೆ ಕೆ ಎಸ್ ಆರ್ ಟಿ ಸಿ ಸ್ಟಾಪ್ ಮತ್ತು ವರ್ಕರ್ಸ್ ಫೆಡರೇಷನ್ ಪತ್ರದ ಮೂಲಕ ತಮ್ಮ ಸಂಘಟನೆಯ ಕಾರ್ಯಕರ್ತರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.
ಸ್ಟಾಪ್ ವರ್ಕರ್ಸ್ ಫೆಡರೇಷನ್ ನ ಸದಸ್ಯರು, ಕಾರ್ಯಕರ್ತರು, ಬೆಂಬಲಿಗರು ಕರ್ತವ್ಯಕ್ಕೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಲಾಗಿದೆ. ಈ ನಿರ್ಧಾರದ ಕುರಿತು ಹೋರಾಟಗಾರರು ಅವಹೇಳನಕಾರಿಯಾಗಿ ಮಾತನಾಡಿದ್ರೆ ಅವರ ವಿರುದ್ಧವಾಗಿ ಶಾಂತಿಯುತ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಬರೆಯಲಾಗಿದೆ.


ಈ ಮೂಲಕ ನೌಕರರ ನಡುವೆ ಗೊಂದಲ ಏರ್ಪಟ್ಟಿದ್ದು, ಮುಷ್ಕರ ನಿರತರ ಮೇಲೆಯೇ ಅಸಮಾಧಾನಗಳು ಹೊರಬೀಳುತ್ತಿವೆ. ಈಗ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿಯ ಹಲವು ನೌಕರರು ಮತ್ತೆ ಕೆಲಸ್ಕೆ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.