ಮಂಗಳೂರು-ಮಂಗಳೂರಿನ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಅವರ ಮಗಳು ಬರೆದ ಮನಮಿಡಿಯುವಂತಿದೆ. ಜಿತೇಂದ್ರರ ಒಂಬತ್ತು ವರ್ಷದ ಮಗಳು ರಿಶಿಕಾ ಬರೆದ ಪತ್ರದಲ್ಲಿ ಪ್ರೀತಿಯಿದೆ. ಅಪ್ಪನೊಂದಿಗೆ ಇರುವ ಆ ಸ್ನೇಹವಿದೆ.ಅಪ್ಪನೆಂದರೆ ತ್ಯಾಗಿ ಅನ್ನೋ ಮನೋಭಾವವೂ ಇದೆ. ಈ ಲೇಖನ ಅದೆಷ್ಟೋ ಬಾಲಕ ಬಾಲಕಿಯರಿಗೆ ಸ್ಫೂರ್ತಿಯಾಗಬಹುದು, ಅದಕ್ಕಾಗಿ ನಿಮ್ಮ ದಿ ಇಂಡಿಯಾ ಕವರೇಜ್ ಈ ಲೇಖನವನ್ನು ಪ್ರಕಟಿಸುತ್ತಿದೆ.

ಪತ್ರದಲ್ಲಿ ಏನಿದೆ
ದಿನಾಂಕ-30-06-2020
ಅಪ್ಪನ ಮಮತೆ
ಅಪ್ಪ ಅಂದರೆ ಯಾವ ಮಕ್ಕಳಿಗೆ ಇಷ್ಟ ಇಲ್ಲ, ಎಲ್ಲರಿಗೂ ಅಪ್ಪ ಅಂದರೆ ತುಂಬ ಇಷ್ಟ,ನಾವು ಮಕ್ಕಳು ನಮಿಗೋಸ್ಕರ ನಾವು ಎಲ್ಲವನ್ನೂ ಮಾಡುತ್ತೇವೆ.ಆದರೆ ಅಪ್ಪ ತನ್ನ ಮಕ್ಕಳಿಗೆ ಎಲ್ಲವನ್ನೂ ಮಾಡುತ್ತಾರೆ.ಅದಕ್ಕೆ ಅವರನ್ನು ಅಪ್ಪ ಅಂತ ಹೇಳುತ್ತಾರೆ.ನೀವು ನೋಡಿರುತ್ತೀರಿ ಸಿನಿಮಾದಲ್ಲಿ ಹೀರೋಗಳು ಇರುತ್ತಾರೆ. ಆದರೆ ನಮ್ಮಕಣ್ಣ ಮುಂದೆ ಒಬ್ಬ ಹೀರೋ ಇದ್ದಾರೆ, ಅವರೇ ನಮ್ಮ ಅಪ್ಪ. ನಾವು ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದ್ದರೂ ಅಪ್ಪನ ಅಂಶದಿಂದಲೂ ಹುಟ್ಟಿದ್ದೇವೆ.ಅಪ್ಪ ತನ್ನ ಸಂಸಾರಕ್ಕೆಂದು ದುಡಿಯುತ್ತಾರೆ.ನೋಡಲು ಗತ್ತಿನ ರಾಜ,ಆದರೆ ಮನಸ್ಸು ದೇವರಂತೆ ಕೋಮಲ. ತನ್ನ ಕಷ್ಟದಲ್ಲೂ ಸುಖವನ್ನು ನೋಡುವ ಅಪ್ಪ ಐ ಲವ್ ಯೂ ಅಪ್ಪ ಐ ಲವ್ ಯೂ..
ರಿಶಿಕಾ ಕುಂದೇಶ್ವರ

ಇದು ನಿಜಕ್ಕೂ ಅಪ್ಪನ ಬಗ್ಗೆ ಮಕ್ಕಳಿಗಿರುವ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ. ಇಂತಹ ಅದೆಷ್ಟೋ ಮಕ್ಕಳು ಅಪ್ಪ, ಅಮ್ಮ,ಅಕ್ಕ, ಅಣ್ಣ, ತಮ್ಮ ತಂಗಿಯ ಬಗ್ಗೆ ಇಂತಹ ನವಿರಾದ ಭಾವನೆ ಹೊಂದಿರುತ್ತಾರೆ. ಅವರಿಗೂ ಕೂಡ ಈ ಪತ್ರ ಸ್ಫೂರ್ತಿಯಾದ್ರೆ ಅಷ್ಟೇ ಸಾಕು