ಬೆಂಗಳೂರು: ಕಡೂರು ತಾಲೂಕಿನ ಗುಣಸಾಗರದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಧಾನಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡರ ಸಾವು ಅಚ್ಚರಿಗೆ ಕಾರಣವಾಗಿದೆ. ಹುಲಿಯಂತಿದ್ದ ರಾಜಕಾರಣಿಯ ಸಾವಿಗೆ ಪರಿಷತ್ ನಲ್ಲಿ ಆದ ಎಳೆದಾಟ, ಹೊಯ್ದಾಟಗಳೇ ಕಾರಣವಾಯ್ತಾ ಅನ್ನುವ ಅನುಮಾನ ಈಗ ಮೂಡಿದೆ.
ಧರ್ಮೇಗೌಡರು ಪರಿಷತ್ ನಲ್ಲಿ ನಡೆದ ಗಲಾಟೆಯಿಂದ ತೀವ್ರ ನೊಂದಿದ್ದರು. ಅಲ್ಲದೆ ತನ್ನ ಗೌರವವಕ್ಕೆ ಕುಂದು ತಂದಿದೆ ಅಂತ ಅಂದುಕೊಂಡು ಕೊರಗುತ್ತಿದ್ದರು.ಹುಲಿಯಂತೆ ರಾಜಕಾರಣ ಮಾಡಿದ್ದಾತನ ಮೈಮುಟ್ಟಿದ್ರು ಅಂತ ಗೆಳೆಯರ ಬಳಿ ಬೇಸರ ವ್ಯಕ್ತಪಡಿಸುತ್ತಿದ್ದರಂತೆ, ಈ ಭಾವನೆಯೇ ಖಿನ್ನತೆಗೆ ಕಾರಣವಾಯ್ತಾ ಅನ್ನುವ ಅನುಮಾನ ಮೂಡಿದೆ.
ನಿನ್ನೆ ರಾತ್ರಿ ಒಬ್ಬರೇ ಮನೆಯಿಂದ ತೆರಳಿದ್ದ ಧರ್ಮೇಗೌಡರು ತಡರಾತ್ರಿಯಾದ್ರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ಆರಂಭಿಸಲಾಗಿತ್ತು. ಅಲ್ಲದೇ ಸೋಮವಾರ ಮಧ್ಯಾಹ್ನದ ತನಕ ತೋಟದ ಮನೆಯಲ್ಲೇ ಇದ್ದ ಧರ್ಮೇಗೌಡರು ನಂತರ ಆತ್ಮಹತ್ಯೆ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಪರಿಷತ್ ಗಲಾಟೆ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣವಾಗಿದ್ದರೇ,ಪರೋಕ್ಷವಾಗಿ ಮೇಲ್ಮನೆಯ ಪ್ರಬುದ್ಧರೇ ಕಾರಣವಾಗುತ್ತಾರಲ್ವಾ ಅನ್ನೋದು ಜನರ ಪ್ರಶ್ನೆಯಾಗಿದೆ.
